ವಿಟಮಿನ್ ಡಿ ಕೊರತೆಯಿದೆ ಎಂಬ ಕಾರಣಕ್ಕೆ ವೈದ್ಯರ ಸಲಹೆಯಿಲ್ಲದೆ ಸಪ್ಲಿಮೆಂಟರಿ ಸೇವನೆ ಒಳ್ಳೆಯದಲ್ಲ. ವಿಟಮಿನ್ ಡಿ ಹೆಚ್ಚಾದ್ರೂ ಅಪಾಯವಿರುತ್ತದೆ. ಬೇರೆ ವಿಟಮಿನ್ ಗಳಂತೆ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ವಿಟಮಿನ್ ಡಿ ಬೇಕು. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಸುಲಭವಾಗಿ ವಿಟಮಿನ್ ಡಿ ಪಡೆಯಬಹುದು.
ಹಲ್ಲುಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ, ಹಾರ್ಮೋನುಗಳು ಬಲಗೊಳ್ಳಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಸೋಂಕಿನ ವಿರುದ್ಧ ಹೋರಾಡಲು ವಿಟಮಿನ್ ಡಿ ಬೇಕು.
ಸೂರ್ಯನ ಕಿರಣವಲ್ಲದೆ ಮೀನು, ಮೊಟ್ಟೆ, ಧಾನ್ಯಗಳು, ಬೆಣ್ಣೆ, ಮೊಸರು, ಹಾಲಿನಲ್ಲಿ ವಿಟಮಿನ್ ಡಿ ಸಿಗುತ್ತದೆ. ವಿಟಮಿನ್ ಡಿ ಪಡೆಯಲು ಸೂರ್ಯನ ಕಿರಣ ತೆಗೆದುಕೊಳ್ತಿದ್ದರೆ ಚರ್ಮವನ್ನು ಮುಚ್ಚಿ. ಸನ್‌ಸ್ಕ್ರೀನ್ ಹಚ್ಚುವುದರಿಂದ ಚರ್ಮವನ್ನು ಸೂರ್ಯನಿಂದ ರಕ್ಷಿಸಬಹುದು.
ವಿಟಮಿನ್ ಡಿ ಕೊರತೆಯಿರುವ ಜನರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ಮಾರುಕಟ್ಟೆಯಲ್ಲಿ ವಿಟಮಿನ್ ಡಿ ಮಾತ್ರೆಗಳು ಲಭ್ಯವಿದೆ. ಆದ್ರೆ ವೈದ್ಯರ ಸಲಹೆ ಪಡೆದು ಇದನ್ನು ಸೇವಿಸಬೇಕು.