ಸಂಭೋಗ ಸಾಮಾನ್ಯ ಪ್ರಕ್ರಿಯೆ. ಆದ್ರೆ ಇದನ್ನು ಮೊದಲೇ ಪ್ಲಾನ್ ಮಾಡಿದ್ದರೆ ಸೆಕ್ಸ್ ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಬಹುದು. ಕೆಲವೊಂದು ಟಿಪ್ಸ್ ಬಳಸಿದ್ರೆ ಸಂಭೋಗದಲ್ಲಿ ಮತ್ತಷ್ಟು ಸುಖ ಅನುಭವಿಸಬಹುದು.
ತಜ್ಞರ ಪ್ರಕಾರ ನಮ್ಮ ಕ್ರಿಯೆ ಮಿದುಳಿನೊಂದಿಗೆ ಸಂಬಂಧ ಹೊಂದಿದೆಯಂತೆ. ಹಾಗಾಗಿ ಆ್ಯಕ್ಟ್ ಶುರು ಮಾಡುವ ಮೊದಲು ಸೆಕ್ಸ್ ಬಗ್ಗೆ ಆಲೋಚನೆ ಮಾಡಿ. ಸಂಭೋಗದ ಬಗ್ಗೆ ಕಲ್ಪನೆ ಮಾಡಿಕೊಳ್ಳಿ. ಇಲ್ಲವಾದ್ರೆ ಅದಕ್ಕೆ ಸಂಬಂಧಿಸಿದ ಪುಸ್ತಕವನ್ನು ಓದಬಹುದು. ಇದು ನಿಮ್ಮ ಮೆದುಳನ್ನು ಉತ್ತೇಜಿಸುತ್ತದೆ.
ಸಸ್ಪೆನ್ಸ್ ಇರಲಿ. ದಿನವಿಡಿ ಸಂಗಾತಿ ಜೊತೆ ಈ ಬಗ್ಗೆ ಚಾಟ್ ಮಾಡಿ. ಮಾದಕ ಬಟ್ಟೆಗಳಲ್ಲಿ ಅವ್ರನ್ನು ನೋಡುವ ಇಚ್ಛೆ ವ್ಯಕ್ತಪಡಿಸಿ. ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಅವ್ರು ಉತ್ಸುಕರಾಗ್ತಾರೆ. ಆದ್ರೆ ತಕ್ಷಣ ರಹಸ್ಯವನ್ನು ಬಿಟ್ಟುಕೊಡಬೇಡಿ.
ಸುರಕ್ಷಿತ ಸೆಕ್ಸ್ ಗೆ ಕಾಂಡೋಮ್ ಅತ್ಯಗತ್ಯ. ಆ್ಯಕ್ಟ್ ಶುರುವಾಗುವ ಮೊದಲೇ ಅದು ಸಿದ್ಧವಾಗಿರಲಿ. ಜೊತೆಗೆ ಲೂಬ್ರಿಕೆಂಟ್ ಗಳನ್ನು ವ್ಯವಸ್ಥೆ ಮಾಡಿಕೊಳ್ಳಿ.
ಸಂಭೋಗದ ಸುಖ ಹೆಚ್ಚಾಗಲು ಪರಿಸರ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಸುಂದರ, ಶಾಂತ ಪರಿಸರ, ಕ್ಯಾಂಡಲ್ ಲೈಟ್ ಎಲ್ಲವೂ ಸಂತೋಷವನ್ನು ಇಮ್ಮಡಿಗೊಳ್ಳಿಸುತ್ತದೆ.