ನೇರಳೆ ಹಣ್ಣಿನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಬಿ, ಖನಿಜಗಳು, ಮೆಗ್ನೀಸಿಯಂ, ಪೊಟ್ಯಾಸಿಯಂ, ಗ್ಲುಕೋಸ್ ಮೊದಲಾದ ಅಂಶಗಳು ಹೆಚ್ಚಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ನೇರಳೆ ಹಣ್ಣು ಕಾಡಿನ ಬೆಳೆಯಾಗಿದ್ದು ಯಾವುದೇ ಆರೈಕೆಯಿಲ್ಲದೆ ಬೆಳೆಯುತ್ತದೆ. ಬಟಾಣಿಯಷ್ಟು ಪುಟ್ಟ ಗಾತ್ರದಿಂದ ಹಿಡಿದು ನಮ್ಮ ನಡು ಬೆರಳ ಅರ್ಧದಷ್ಟಿರುವ ದೊಡ್ಡ ಗಾತ್ರದ ನೇರಳೆ ಹಣ್ಣುಗಳು ಇವೆ. ದೊಡ್ಡ ಗಾತ್ರದ ನೇರಳೆ ಹಣ್ಣು ಯಥೇಚ್ಛವಾಗಿ ದೊರೆಯುತ್ತದೆ. ಹಣ್ಣಾದ ಬಳಿಕ ಗಾಢ ನೇರಳೆ ಬಣ್ಣ ಪಡೆದರೂ, ದೊಡ್ಡ ಗಾತ್ರ ಬೀಜವಿರುತ್ತದೆ. ಕಹಿಯಾಗಿರುವ ಈ ಬೀಜವನ್ನೂ ಔಷಧದ ರೂಪದಲ್ಲಿ ಬಳಸಿಕೊಳ್ಳಬಹುದು.
ಇದು ಮಧುಮೇಹಕ್ಕೆ ತುಂಬಾ ಒಳ್ಳೆಯದು. ಕೊಲೆಸ್ಟ್ರಾಲ್ ಇಳಿಕೆ, ಸರಿಯಾದ ಜೀರ್ಣಕ್ರಿಯೆ, ಕಣ್ಣಿನ ದೃಷ್ಟಿ ಮತ್ತು ಚರ್ಮದ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ. ಇದರ ಜ್ಯೂಸ್ ಸೇವನೆಯಿಂದಲೂ ಹೃದಯ ಸಂಬಂಧಿ ರೋಗಗಳನ್ನು ಗುಣಪಡಿಸಿಕೊಳ್ಳಬಹುದು.