ಉಡುಪಿಯ ಕೃಷ್ಣ ಮಠ ಪ್ರಸಿದ್ಧ ಯಾತ್ರಾ ಸ್ಥಳವೂ ಹೌದು, ಪ್ರವಾಸಿ ತಾಣವೂ ಹೌದು. ಇಲ್ಲಿನ ಕೃಷ್ಣ ದೇವಾಲಯವೇ ಕೃಷ್ಣ ಮಠ. ಮಧ್ವಾಚಾರ್ಯರು ಇಲ್ಲಿ ಕೃಷ್ಣನ ಮೂರ್ತಿಯನ್ನು ಸ್ಥಾಪಿಸಿದರು.
ಅಷ್ಟಮಠಗಳು ಇಲ್ಲಿನ ಪೂಜೆಯ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿವೆ. ಎರಡು ವರ್ಷಕ್ಕೊಮ್ಮೆ ಮಠಗಳು ಪೂಜೆಯ ಜವಾಬ್ದಾರಿಯನ್ನು ವರ್ಗಾಯಿಸಿಕೊಳ್ಳುತ್ತವೆ. ಇದನ್ನು ಪರ್ಯಾಯ ಎಂದು ಕರೆಯಲಾಗುತ್ತದೆ. ವಿಶ್ವವಿಖ್ಯಾತವಾದ ಈ ಸಮಾರಂಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.
ಕೃಷ್ಣಾಷ್ಟಮಿಯನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕೃಷ್ಣನಿಗೆ ಪೂಜೆಯೊಂದಿಗೆ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ಭಕ್ತರಿಗೂ ಅದನ್ನು ಹಂಚಲಾಗುತ್ತದೆ.
13ನೆಯ ಶತಮಾನದಲ್ಲಿ ಮಠವನ್ನು ಕಟ್ಟಲಾಗಿದ್ದು ಇದು ದ್ರಾವಿಡ ಶೈಲಿಯಲ್ಲಿದೆ. ಕನಕನ ಕಿಂಡಿಯಿಂದಲೂ ಕೃಷ್ಣ ದರ್ಶನ ಪಡೆಯಬಹುದು. ಪ್ರತಿದಿನ ಇಲ್ಲಿಗೆ ಬರುವ ಭಕ್ತರಿಗೆ ಊಟದ ವ್ಯವಸ್ಥೆಯೂ ಇದೆ.