ಉಡುಪಿ- ಗ್ರಾಹಕರಿಗೆ ಕಾಯುತ್ತಾ ಇತರರಿಗೆ ತೊಂದರೆ ಮಾಡುತ್ತಿದ್ದ ಲೈಂಗಿಕ ಕಾರ್ಯಕರ್ತರಿಗೆ ಉಡುಪಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ ಪರಿಣಾಮ ಸರಿ ಇರೋದಿಲ್ಲ ಅಂತ ನೇರವಾಗಿ ಎಚ್ಚರಿಸಿದ್ದಾರೆ.
ಹೌದು, ಕೂಲಿ ಕಾರ್ಮಿಕರು ಸೇರಿದಂತೆ ನಗರಕ್ಕೆ ಹಲವಾರು ಜನ ಬಂದೋಗುತ್ತಾರೆ. ಇಂಥಹ ಸಮಯದಲ್ಲಿ ಬಸ್ ನಿಲ್ದಾಣ ಸೇರಿ ಜನ ನಿಬಿಡ ಪ್ರದೇಶದಲ್ಲಿ ಇವರಿಂದ ತೊಂದರೆ ಆಗ್ತಾ ಇತ್ತು. ಈ ವಿಚಾರವಾಗಿ ಅನೇಕ ಬಾರಿ ಪೊಲೀಸರು ಎಚ್ಚರಿಸಿದರೂ ಈ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸ ತಾವು ಮಾಡ್ತಾ ಇದ್ರು. ಆದರೆ ಇದೀಗ ಪೊಲೀಸರು ನೇರವಾಗಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕೆಲವೊಂದು ಖಾಸಗಿ ಹೊಟೇಲ್ಗಳು ಕೂಡ ಇದರಲ್ಲಿ ಪಾಲುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕಡಿಮೆ ದರದಲ್ಲಿ ಕೊಠಡಿಗಳನ್ನು ಕೊಟ್ಟು ಕಮಿಷನ್ ಪಡೆಯುತ್ತಿದ್ದರಂತೆ. ಹೀಗಾಗಿ ಕಮಿಷನ್ ಆಧಾರದಲ್ಲಿ ಈ ದಂಧೆ ನಗರದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಈ ಎಲ್ಲ ಮಾಹಿತಿಗಳ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಅವರ ಬೆನ್ನು ಹತ್ತಿ ಎಚ್ಚರಿಕೆ ನೀಡಿದ್ದಾರೆ.