ನವದೆಹಲಿ: ದೇಶದ ಜನತೆಗೆ ಉಚಿತ ವ್ಯಾಕ್ಸಿನ್ ಘೋಷಣೆ ಬೆನ್ನಲ್ಲೇ ಕೇಂದ್ರ ಸರ್ಕಾರ 74 ಕೋಟಿ ಡೋಸ್ ವ್ಯಾಕ್ಸಿನ್ ಖರೀದಿಗೆ ಆರ್ಡರ್ ನೀಡಿರುವುದಾಗಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ವ್ಯಾಕ್ಸೀನ್ ಖರೀದಿಗೆ ಎರಡು ಕಂಪನಿಗಳಿಗೆ ಆರ್ಡರ್ ನೀಡಲಾಗಿದ್ದು, 25 ಕೋಟಿ ಕೋವಿಶೀಲ್ಡ್, 19 ಕೋಟಿ ಕೋವ್ಯಾಕ್ಸಿನ್ ಹಾಗೂ 30 ಕೋಟಿ ಬಯಾಲಾಜಿಕಲ್-ಇ ವ್ಯಾಕ್ಸಿನ್ ಖರೀದಿಗೆ ಆರ್ಡರ್ ನೀಡಲಾಗಿದೆ ಎಂದರು.