ಬ್ರಿಟಿಷ್ ಬಿಲಿಯನೇರ್ 70 ವರ್ಷದ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಅಧಿಕೃತವಾಗಿ ಪ್ರಾರಂಭಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರ ಕಂಪನಿ ವರ್ಜಿನ್ ಗ್ಯಾಲಕ್ಟಿಕ್ ಮುಂದಿನ ವರ್ಷ ತನ್ನ ಮೊದಲ ವಾಣಿಜ್ಯ ವಿಮಾನವನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಜ್ಜಾಗಿದೆ. ವರ್ಜಿನ್ ಗ್ಯಾಲಕ್ಟಿಕ್, ಬಾಹ್ಯಾಕಾಶದಲ್ಲಿ ಹಾರಾಡಲು ಉಚಿತ ಅವಕಾಶವೊಂದನ್ನು ನೀಡ್ತಿದೆ.
ವರ್ಜಿನ್ ಗ್ಯಾಲಕ್ಟಿಕ್ ತನ್ನ ಮೊದಲ ವಾಣಿಜ್ಯ ಬಾಹ್ಯಾಕಾಶ ಹಾರಾಟದಲ್ಲಿ 2 ಟಿಕೆಟ್‌ಗಳನ್ನು ಉಚಿತವಾಗಿ ನೀಡಲಿದೆ. ಇದಕ್ಕಾಗಿ ನೋಂದಾಯಿಸಿಕೊಂಡ ಅಭ್ಯರ್ಥಿಗಳಲ್ಲಿ ಇಬ್ಬರನ್ನು ಚೀಟಿ ಆರಿಸುವ ಮೂಲಕ ಆಯ್ಕೆ ಮಾಡಲಿದೆ. ವಿಜೇತರ ಬಾಹ್ಯಾಕಾಶ ಪ್ರಯಾಣದ ಅನುಭವವನ್ನು ಎಚ್‌ಡಿ ವಿಡಿಯೋದಲ್ಲಿ ರೆಕಾರ್ಡ್ ಮಾಡಿ ಅವರಿಗೆ ನೀಡಲಾಗುವುದು. ಸ್ಮರಣೀಯ ಪ್ರಯಾಣದ ಅನುಭವವನ್ನು ಪಡೆಯಲು ವಿಂಡೋ ಸೀಟ್ ನೀಡಲಾಗುವುದು.
ವಿಶ್ವಸಂಸ್ಥೆ ನಿಷೇಧಿಸಿದ ದೇಶವನ್ನು ಬಿಟ್ಟು ಎಲ್ಲ ದೇಶದ ಜನರು ಹೆಸರು ನೋಂದಾಯಿಸಿಕೊಳ್ಳಬಹುದು. ಭಾರತೀಯರು ಇದಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. omaze.com/space ಗೆ ಲಾಗ್ ಇನ್ ಮಾಡಿ. ಅಲ್ಲಿ 2 ಆಯ್ಕೆಗಳು ಬರುತ್ತವೆ. ಒಂದು ಶುಲ್ಕ ಪಾವತಿಸಿ ಟಿಕೆಟ್ ಪಡೆಯಲು ಇನ್ನೊಂದು ಉಚಿತ ಟಿಕೆಟ್ ಗೆ. ಉಚಿತ ಆಯ್ಕೆಯನ್ನು ಆರಿಸಬೇಕು. ಒಂದು ಇ-ಮೇಲ್ ಐಡಿಯಿಂದ ಒಮ್ಮೆ ಮಾತ್ರ ಹೆಸರು ನೋಂದಾಯಿಸಬಹುದು. ಆದ್ರೆ ಬೇರೆ ಬೇರೆ ಇ-ಮೇಲ್ ಐಡಿಯಿಂದ ಗರಿಷ್ಠ 6000 ಬಾರಿ ಹೆಸರು ನೋಂದಾಯಿಸಿಕೊಳ್ಳಬಹುದು.
ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಫಾರ್ಮ್ ಸಲ್ಲಿಸಬೇಕು.ಸೆಪ್ಟೆಂಬರ್2,2021 ರವರೆಗೆ ಈ ಕೆಲಸ ಮಾಡಬಹುದು.ಈ ಬಾಹ್ಯಾಕಾಶ ಪ್ರವಾಸಕ್ಕೆ ಲಸಿಕೆ ಕಡ್ಡಾಯ. ಕನಿಷ್ಠ ವಯಸ್ಸಿನ ಮಿತಿ 18 ವರ್ಷ.