ಹಿಂದೂ ಧರ್ಮದಲ್ಲಿ ಉಗುರು ಕತ್ತರಿಸುವುದು ಮತ್ತು ಶೇವ್ ಮಾಡುವುದಕ್ಕೂ ವಿಶೇಷ ಮಹತ್ವ ನೀಡಲಾಗಿದೆ. ಹೆಚ್ಚಿನ ಜನರು ಮಂಗಳವಾರ ಮತ್ತು ಗುರುವಾರ ಉಗುರುಗಳನ್ನು ಕತ್ತರಿಸುವುದಿಲ್ಲ. ಈ ದಿನ ಶೇವಿಂಗ್ ಮಾಡುವುದಿಲ್ಲ. ವಾರದ ವಿವಿಧ ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಬೇರೆ ಬೇರೆ ಪ್ರಯೋಜನಗಳಿವೆ.
ಸೋಮವಾರ- ಜ್ಯೋತಿಷ್ಯದ ಪ್ರಕಾರ, ಸೋಮವಾರದ ದಿನವು ಮನಸ್ಸಿಗೆ ಸಂಬಂಧಿಸಿದ ದಿನವಾಗಿದೆ. ಸೋಮವಾರ ಉಗುರುಗಳನ್ನು ಕತ್ತರಿಸಿದರೆ ದೈಹಿಕ ಆರೋಗ್ಯ ವೃದ್ಧಿಯಾಗಲಿದೆ. ಮನಸ್ಸು ತಾಜಾ ಆಗಿರುತ್ತದೆ.
ಮಂಗಳವಾರ- ಜ್ಯೋತಿಷ್ಯದ ಪ್ರಕಾರ, ಮಂಗಳವಾರ ಉಗುರುಗಳನ್ನು ಕತ್ತರಿಸುವ ಮೂಲಕ ಸಾಲದ ಸಮಸ್ಯೆಯಿಂದ ಹೊರಗೆ ಬರಬಹುದು
ಬುಧವಾರ- ಜ್ಯೋತಿಷ್ಯದ ಪ್ರಕಾರ, ಬುಧವಾರವನ್ನು ವ್ಯಾಪಾರದ ಬೆಳವಣಿಗೆಯ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಉಗುರುಗಳನ್ನು ಕತ್ತರಿಸಿದರೆ, ಕೆಲಸದಲ್ಲಿ ಪ್ರಗತಿ ಸಾಧಿಸಿ, ಹಣ ಸಂಪಾದನೆ ಮಾಡಬಹುದು.
ಗುರುವಾರ- ಜ್ಯೋತಿಷ್ಯದ ಪ್ರಕಾರ, ಗುರುವಾರ ಉಗುರುಗಳನ್ನು ಕತ್ತರಿಸುವುದರಿಂದ ಸತ್ವ ಗುಣ ಹೆಚ್ಚಾಗುತ್ತದೆ. ಈ ದಿನ ಒಬ್ಬ ವ್ಯಕ್ತಿಯು ತನ್ನ ಉಗುರುಗಳನ್ನು ಕತ್ತರಿಸಿದರೆ, ಮನೆಯಲ್ಲಿನ ಪ್ರತಿಕೂಲ ಮತ್ತು ಅಹಿತಕರ ಘಟನೆ ಕಡಿಮೆಯಾಗುತ್ತದೆ.
ಶುಕ್ರವಾರ- ಜ್ಯೋತಿಷ್ಯದ ಪ್ರಕಾರ, ಈ ದಿನ ಉಗುರುಗಳನ್ನು ಕತ್ತರಿಸುವುದ್ರಿಂದ, ಆಪ್ತ ಸ್ನೇಹಿತರು ಅಥವಾ ಕುಟುಂಬದವರನ್ನು ಭೇಟಿ ಮಾಡಲು ಬಹಳ ದೂರ ಪ್ರಯಾಣಿಸಬೇಕಾಗುತ್ತದೆ.
ಶನಿವಾರ- ಜ್ಯೋತಿಷ್ಯದ ಪ್ರಕಾರ, ಶನಿವಾರ ಉಗುರುಗಳನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಮಾನಸಿಕ ಸ್ಥಿರತೆ ದುರ್ಬಲವಾಗುತ್ತದೆ.
ಭಾನುವಾರ- ಜ್ಯೋತಿಷ್ಯದ ಪ್ರಕಾರ, ಭಾನುವಾರ ಉಗುರುಗಳನ್ನು ಕತ್ತರಿಸುವುದ್ರಿಂದ ಕೆಲಸದಲ್ಲಿ ಅಡೆತಡೆಯುಂಟಾಗುತ್ತದೆ. ಸಮಯ ವ್ಯರ್ಥವಾಗುತ್ತದೆ.