ಮನೆಯ ಕೆಲಸ ಮಾಡುತ್ತಾ ಕೊಳಕಾದ ಕೈಗಳನ್ನು, ಬೆರಳುಗಳನ್ನು ಸ್ವಚ್ಛವಾಗಿ ತೊಳೆಯದೆ ಅದರತ್ತ ಹೆಚ್ಚು ಗಮನ ಕೊಡದೆ ಹೋದರೆ ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಕೈ ನಷ್ಟೇ ಪ್ರಾಮುಖ್ಯತೆ ಉಗುರುಗಳ ಬಗ್ಗೆಯೂ ನೀಡಿ ಸ್ವಚ್ಛ ಮತ್ತು ಆಕರ್ಷಕ ಆಕಾರದ ಉಗುರು ಪಡೆಯಲು ಹೀಗೆ ಮಾಡಿ.
ಪ್ರತಿ ಬಾರಿ ಎಣ್ಣೆಯ ಅಥವಾ ಜಿಡ್ಡಿನ ಅಡುಗೆ ಮಾಡಿದ ಬಳಿಕ ನಿಮ್ಮ ಕೈಯನ್ನು ಅದರಲ್ಲೂ ಉಗುರುಗಳನ್ನು ಸರಿಯಾಗಿ ತೊಳೆಯಲು ಮರೆಯದಿರಿ. ಹೆಚ್ಚು ಹೊತ್ತು ಕೈ ನೀರಿನಲ್ಲಿಡುವುದು ಅಥವಾ ಕೈ ಬೆರಳುಗಳನ್ನು ಸರಿಯಾಗಿ ತೊಳೆಯದೇ ಹಾಗೆ ಬಿಡುವುದರಿಂದ ಶಿಲೀಂಧ್ರ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ನಿಯಮಿತವಾಗಿ ಟ್ರಿಮ್ ಮಾಡಿ – ಪ್ರತಿ ಹದಿನೈದು ದಿನಗಳಿಗೊಮ್ಮೆ ನಿಮ್ಮ ಉಗುರುಗಳನ್ನು ಟ್ರಿಮ್ ಮಾಡುವುದು ನಿಮ್ಮ ಕೂದಲನ್ನು ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಟ್ರಿಮ್ ಮಾಡುವಷ್ಟೇ ಮುಖ್ಯ. ನಿಮ್ಮ ಬೆರಳಿನ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳನ್ನು ಸ್ನಾನದ ಬಳಿಕವೇ ಟ್ರಿಮ್ ಮಾಡಿ. ಆಗ ಅವು ಮೃದುವಾಗಿಯೂ ಇರುತ್ತವೆ.
ಹೊರಪೊರೆಗಳನ್ನು ಕತ್ತರಿಸದಿರಿ. ಉಗುರಿನ ಪಕ್ಕದಲ್ಲಿ ಬರುವ ಬೆಳ್ಳಗಿನ ಸಣ್ಣ ಮುಳ್ಳಿನಂಥ ರಚನೆಗಳನ್ನು ಕತ್ತರಿಸದಿರಿ. ಇವು ಸೂಕ್ಷ್ಮಜೀವಿಗಳು ಉಗುರುಗಳಿಗೆ ಪ್ರವೇಶಿಸದಂತೆ ಮತ್ತು ಸೋಂಕು ತಗುಲದಂತೆ ತಡೆಯುತ್ತದೆ. ಕೈಯಲ್ಲಿ ಹೆಚ್ಚು ಹೊತ್ತು ನೀರು ಉಳಿಯದಂತೆ ನೋಡಿಕೊಳ್ಳಿ. ನಿತ್ಯ ಪಾಲಿಶ್ ಬಳಸುವ ಬದಲು ಕೆಲವು ದಿನಗಳ ಬ್ರೇಕ್ ಕೊಡಿ.