ಸುಸ್ಪಷ್ಟವಾದ ಉಗುರಿನ ವಿನ್ಯಾಸ ಹೊಂದಬೇಕಾದಲ್ಲಿ ಮ್ಯಾನಿಕ್ಯೂರ್ ನಿಮಗೆ ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಉಗುರುಗಳನ್ನು ಹಾಗೇ ಉಜ್ಜಿ, ಫಿನಿಶಿಂಗ್ ಟಚ್-ಅಪ್ ಕೊಟ್ಟು, ಬಣ್ಣ ಹಾಕುವುದೇ ಹೆಚ್ಚಾಗಿದೆ. ಉಗುರು ಕಲೆಯ ಜನಪ್ರಿಯತೆಯೂ ಹಾಗೇ ಇದೆ.
ದುಬೈನ ಉಗುರು-ಕಲೆಯ ಸಲೂನ್ ಒಂದು ಈ ವಿಚಾರದಲ್ಲಿ ಬಹಳ ಮುಂದೆ ಹೋಗಿದೆ. ನೇಲ್ ಸನ್ನಿ ಎಂದು ಕರೆಯಲ್ಪಡುವ ಈ ವ್ಯಕ್ತಿ, ನಿಜವಾದ ಮೀನುಗಳನ್ನು ಬಳಸಿಕೊಂಡು ಉಗುರುಗಳ ಮ್ಯಾನಿಕ್ಯೂರಿಂಗ್ ಮಾಡುವ ಐಡಿಯಾಗೆ ಜೀವ ಕೊಟ್ಟಿದ್ದಾರೆ. ಉಗುರುಗಳಿಗೆ ಎಕ್ಸ್‌ಟೆನ್ಷನ್ ಕೊಟ್ಟು, ಅದರೊಳಗೆ ಮೀನನ್ನು ಬಿಟ್ಟು ಅದರಿಂದ ಮ್ಯಾನಿಕ್ಯೂರಿಂಗ್ ಮಾಡುವುದು ಇಲ್ಲಿನ ಐಡಿಯಾ ಆಗಿದೆ.
ಹೀಗೆ ಮಾಡಿದಾಗ ಮೀನಿಗೆ ಈಜಲು ಸಾಧ್ಯವಾಗದಲ್ಲದೇ, ಉಸಿರಾಟಕ್ಕೆ ತೊಂದರೆಯಾಗಬಹುದೆಂದು ಪ್ರಾಣಿದಯಾ ಸಂಘಟನೆ ಪೇಟಾ ಖಂಡಿಸಿದೆ.
“ಪ್ರಾಣಿಗಳನ್ನು ಸೌಂದರ್ಯದ ವಸ್ತುಗಳನ್ನಾಗಿ ಬಳಸುವುದು ದುಃಖಕರ ಹಾಗೂ ಮುಠ್ಠಾಳತನ. ಮೀನುಗಳನ್ನು ತಮ್ಮ ಸ್ವಾಭಾವಿಕ ನೆಲೆಗಳಿಂದ ಹೊರತೆಗೆದು ಪುಟಾಣಿ ಜಾಗದೊಳಗೆ ಸೇರಿಸುವುದಕ್ಕೆ ಕ್ಷಮೆಯಿಲ್ಲ” ಎಂದು ಪೇಟಾ ನಿರ್ದೇಶಕಿ ಎಲಿಸಾ ಅಲ್ಲೆನ್ ಹೇಳಿದ್ದಾರೆ.