ಪ್ರತಿಯೊಬ್ಬರ ಉಗುರಿನ ಬಣ್ಣ ಭಿನ್ನವಾಗಿರುತ್ತದೆ. ಉಗುರುಗಳು ಮನುಷ್ಯನ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ಹೇಳುತ್ತವೆ.
ಬೆಳ್ಳಗಿರುವ ಉಗುರುಗಳು ಆರ್ಥಿಕ ಪ್ರಗತಿ ಮತ್ತು ಶ್ರೀಮಂತಿಕೆಯನ್ನು ತೋರಿಸುತ್ತದೆ. ಉಗುರುಗಳು ನಯವಾಗಿ, ರೇಖೆ ಸ್ಪಷ್ಟವಾಗಿ ಕಾಣಿಸುವ ಉಗುರು ಶ್ರೀಮಂತಿಕೆಯ ಸಂಕೇತ.
ಗುಲಾಬಿ ಬಣ್ಣದ, ಹೊಳೆಯುವ, ನಯವಾದ ಉಗುರು ಅದೃಷ್ಟದ ಸಂಕೇತ. ಬೆರಳಿನಿಂದ ಹೊರ ಬಂದ ಮೇಲೆ ಗುಲಾಬಿ ಬಣ್ಣಕ್ಕೆ ಉಗುರು ತಿರುಗಿದ್ರೆ ಅದನ್ನು ಅದೃಷ್ಟದ ಸಂಕೇತವೆನ್ನಲಾಗುತ್ತದೆ.
ಉಗುರಿನ ಮೇಲೆ ಅರ್ಧ ಚಂದ್ರದ ಆಕೃತಿಯಿದ್ದರೆ ಶುಭಕರ. ಅದನ್ನು ಪ್ರಗತಿಯ ಸಂಕೇತ ಎನ್ನಲಾಗುತ್ತದೆ. ಅವ್ರ ಭವಿಷ್ಯ ಉತ್ತಮವಾಗಿರುತ್ತದೆ.
ಉಗುರುಗಳು ಚಿಕ್ಕದಾಗಿರುವ ಜನರು, ಎಷ್ಟೇ ಎತ್ತರ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ್ರೂ ಸಮುದ್ರ ಶಾಸ್ತ್ರದ ಪ್ರಕಾರ ಉತ್ತಮ ಸ್ವಭಾವದವರಲ್ಲ ಎಂದು ಹೇಳಲಾಗುತ್ತದೆ. ಅಂತಹ ಜನರು ಅಸಭ್ಯ ಮತ್ತು ಸ್ವಾರ್ಥಿಗಳು ಎನ್ನಲಾಗುತ್ತದೆ.
ವಕ್ರ ಹಾಗೂ ಹಾಳಾದ ಉಗುರನ್ನು ಹೊಂದಿರುವವರಿಂದ ದೂರವಿರಬೇಕು. ಅವ್ರ ಮನಸ್ಸಿನಲ್ಲಿ ಅಪರಾಧ ಮನೋಭಾವ ಅಡಗಿರುತ್ತದೆನ್ನಲಾಗಿದೆ.
ಒಬ್ಬ ವ್ಯಕ್ತಿಯು ಸಣ್ಣ ಮತ್ತು ಹಳದಿ ಉಗುರುಗಳನ್ನು ಹೊಂದಿದ್ದರೆ, ವ್ಯಕ್ತಿಯು ಬುದ್ಧಿವಂತ ಸ್ವಭಾವದವನಾಗಿರುತ್ತಾನೆ. ವೃತ್ತಾಕಾರದ ಉಗುರು ಹೊಂದಿರುವ ವ್ಯಕ್ತಿ ಆಲೋಚನೆಗಳು ಬಲವಾಗಿರುತ್ತವೆ. ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ.