ಉಗುರು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ನಿಮ್ಮ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
ಉಗುರಿಗೆ ಆಗಾಗ ಮೆನಿಕ್ಯೂರ್ ಮಾಡಿಸುವ ಅಭ್ಯಾಸ ಇಟ್ಟುಕೊಳ್ಳಿ. ಅಂದವಾದ, ನಿಮ್ಮ ಉಡುಪಿಗೊಪ್ಪುವ ಬಣ್ಣದ ನೇಲ್ ಪಾಲಿಷ್ ಹಚ್ಚಿಕೊಳ್ಳಿ. ಮನೆಯಲ್ಲಿ ವಾರದಲ್ಲಿ ಎರಡು ಬಾರಿ ಬಿಸಿನೀರಿಗೆ ಲಿಂಬೆ ತುಂಡು ಹಾಕಿ ಕಿವುಚಿ, ಬೆರಳು ಹಾಗು ಉಗುರನ್ನು ಸ್ವಚ್ಛವಾಗಿ ತೊಳೆಯಿರಿ.
ಸಾಬೂನು ಅಥವಾ ಇತರ ರಾಸಾಯನಿಕಗಳನ್ನು ಬಳಸುವಾಗ ಉಗುರಿಗೆ ಹಾನಿಯಾಗುವುದನ್ನು ತಪ್ಪಿಸಲು ಗ್ಲೌಸ್ ಧರಿಸಿ. ಉಗುರು ಕಟ್ ಮಾಡುವ ಮುನ್ನ ಸ್ವಲ್ಪ ಹೊತ್ತು ನೀರಿನಲ್ಲಿ ಕೈಯನ್ನು ನೆನೆಸಿಡಿ. ಇಲ್ಲವೇ ಸ್ನಾನ ಮಾಡಿ ಬಂದ ಬಳಿಕ ಉಗುರು ಕತ್ತರಿಸಿ.
ಪದೇ ಪದೇ ರಿಮೂವರ್ ಬಳಸುವುದರಿಂದ ಉಗುರಿನ ಮೇಲ್ಭಾಗ ಹಾನಿಯಾಗಬಹುದು. ಅದನ್ನು ತಪ್ಪಿಸಿ. ಸನ್ ಸ್ಕ್ರೀನ್ ಬಳಸುವ ಮೂಲಕ ನಿಮ್ಮ ಉಗುರಿನ ಸೌಂದರ್ಯ ಕಾಪಾಡಿಕೊಳ್ಳಿ.
ಆಗಾಗ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ಉಗುರನ್ನು ಬಲಿಷ್ಠವಾಗಿಸಿಕೊಳ್ಳಬಹುದು. ಇದರಿಂದ ನಿಮ್ಮ ಉಗುರು ಪದೇ ಪದೇ ತುಂಡಾಗುವುದು ತಪ್ಪುತ್ತದೆ.