
ರಷ್ಯಾದ ಸೈನಿಕರು ಸಿಡಿಸಿದ ಬುಲೆಟ್ ನೇರವಾಗಿ ಉಕ್ರೇನ್ ಯೋಧನ ಮೊಬೈಲ್ ಫೋನ್ ಗೆ ಬಡಿದಿದ್ದರಿಂದ ಸೈನಿಕ ಬಚಾವಾಗಿದ್ದಾನೆ. ಮೊಬೈಲ್ ಗೆ ತಗುಲಿರುವ ಬುಲೆಟ್ ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ಉಕ್ರೇನ್‌ನ ಕಡೆಯಿಂದ ಹೋರಾಡುತ್ತಿರುವ ಸೈನಿಕನೊಬ್ಬ, 7.62 ಎಂಎಂ ಬುಲೆಟ್ ಹೊಡೆದ ನಂತರ ಸ್ಮಾರ್ಟ್‌ಫೋನ್ ತನ್ನ ಜೀವವನ್ನು ಹೇಗೆ ಉಳಿಸಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಮೊದಲಿಗೆ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ ಭಯಾನಕ ವಿಡಿಯೋವನ್ನು ನಂತರ ಯೂಟ್ಯೂಬ್ ಮತ್ತು ಟ್ವಿಟ್ಟರ್‌ನಲ್ಲೂ ಹಂಚಿಕೊಳ್ಳಲಾಗಿದೆ. ಮೊಬೈಲ್ ನ ಹಿಂಭಾಗದಲ್ಲಿ ಸಿಲುಕಿರುವ ಬುಲೆಟ್ ಅನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಇಬ್ಬರು ಸೈನಿಕರು ಉಕ್ರೇನಿಯನ್ ಭಾಷೆಯಲ್ಲಿ ಮಾತನಾಡುವುದನ್ನು ವಿಡಿಯೋದಲ್ಲಿ ಕೇಳಬಹುದು. ಅಲ್ಲಿ ಸೈನಿಕನೊಬ್ಬ ಈ ಸ್ಮಾರ್ಟ್‌ಫೋನ್ ತನ್ನ ಜೀವವನ್ನು ಉಳಿಸಿದೆ ಎಂದು ಹೇಳುತ್ತಾ, ತನ್ನ ಜೇಬಿನಲ್ಲಿದ್ದ ಮೊಬೈಲ್ ಅನ್ನು ಹೊರತೆಗೆದು ತೋರಿಸಿದ್ದಾನೆ.