alex Certify ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಿನ್ನೆಲೆ ತಿಳಿದ್ರೆ ಅಚ್ಚರಿ ಪಡ್ತೀರಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಿನ್ನೆಲೆ ತಿಳಿದ್ರೆ ಅಚ್ಚರಿ ಪಡ್ತೀರಾ…..!

ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣ ಮಾಡುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ. ಆದರೆ, ಪುಟ್ಟ ರಾಷ್ಟ್ರ ಉಕ್ರೇನ್ ಬಗ್ಗೆ ನಿಮಗೆಷ್ಟು ಗೊತ್ತು..? ಅದರಲ್ಲೂ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾಗುವ ಮೊದಲು ಏನಾಗಿದ್ದರು ಎಂಬುದು ನಿಮಗೆ ತಿಳಿದಿದೆಯೇ..?

ಹೌದು, ಝೆಲೆನ್ಸ್ಕಿ 2019 ರಲ್ಲಿ ಉಕ್ರೇನ್ ಅಧ್ಯಕ್ಷರಾಗುವ ಮೊದಲು ಹಲವಾರು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಹಾಸ್ಯನಟರಾಗಿ ಅಭಿನಯಿಸಿದ್ದರು. ಅವರು 2006 ರಲ್ಲಿ ಉಕ್ರೇನ್‌ನ ಡ್ಯಾನ್ಸಿಂಗ್ ವಿತ್ ದಿ ಸ್ಟಾರ್ಸ್‌ನ ಆವೃತ್ತಿಯನ್ನು ಗೆದ್ದಿದ್ದರು. ಹಾಗೂ ಉಕ್ರೇನಿಯನ್ ದೂರದರ್ಶನ ಸರಣಿ ಸರ್ವೆಂಟ್ ಆಫ್ ದಿ ಪೀಪಲ್‌ನಲ್ಲಿ ಅವರ ಪ್ರಮುಖ ಪಾತ್ರಕ್ಕಾಗಿ ಅವರು ಮನೆಮಾತಾಗಿದ್ದರು.

ಝೆಲೆನ್ಸ್ಕಿ ಅವರ ವೃತ್ತಿಜೀವನದ ಬಗೆಗಿನ ಕೆಲವು ವಿಚಾರಗಳು ಈಗ ಆನ್‌ಲೈನ್‌ನಲ್ಲಿ ಹೊರಹೊಮ್ಮಿದೆ. ಮಕ್ಕಳ ಚಲನಚಿತ್ರದ ಉಕ್ರೇನಿಯನ್ ಡಬ್ ಆವೃತ್ತಿಯಲ್ಲಿ ಝೆಲೆನ್ಸ್ಕಿ ಪ್ಯಾಡಿಂಗ್ಟನ್ ಬೇರ್‌ಗೆ ಧ್ವನಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ಯಾಡಿಂಗ್ಟನ್ (2014) ಮತ್ತು ಪ್ಯಾಡಿಂಗ್‌ಟನ್ 2 (2017) ನಲ್ಲಿ ಅನಿಮೇಟೆಡ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಝೆಲೆನ್ಸ್ಕಿ ಅಧ್ಯಕ್ಷರಾಗುವ ಮೊದಲು, ಸರ್ವೆಂಟ್ ಆಫ್ ದಿ ಪೀಪಲ್‌ನಲ್ಲಿ ನಟಿಸಿದ ಪಾತ್ರಕ್ಕಾಗಿ ಉಕ್ರೇನ್‌ನಲ್ಲಿ ಹೆಸರುವಾಸಿಯಾಗಿದ್ದರು.

https://twitter.com/hughbon/status/1498044445551439879?ref_src=twsrc%5Etfw%7Ctwcamp%5Etweetembed%7Ctwterm%5E1498044445551439879%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fukraine-president-volodymyr-zelensky-voiced-paddington-bear-2796260

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...