
ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಲವಾರು ದೇಶಗಳು ಮತ್ತು ಸಂಸ್ಥೆಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಘೋಷಿಸಿವೆ. ಅನೇಕರು ದೇಣಿಗೆ ಮತ್ತು ಇತರ ವಿಧಾನಗಳ ಮೂಲಕ ಉಕ್ರೇನ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಉಕ್ರೇನ್ ಪರವಾಗಿ ನಿಂತ ಪ್ರಪಂಚದ ಹಲವಾರು ಜನರು ದೇಣಿಗೆ ನೀಡಲು ಮುಂದಾಗಿದ್ದಾರೆ. ಜೊತೆಗೆ ಏರ್ ಬಿಎನ್‍ಬಿ ಕೊಠಡಿಗಳನ್ನು ಬುಕ್ ಮಾಡಿದ್ದಾರೆ. ಅವರು ಉಕ್ರೇನ್‌ಗೆ ಭೇಟಿ ನೀಡಲು ಸಾಧ್ಯವಾಗದಿದ್ದರೂ ಸಹ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಏರ್ ಬಿಎನ್‍ಬಿ ಅನ್ನು ಹೇಗೆ ಬುಕ್ ಮಾಡಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ ಬಳಕೆದಾರರು ಈ ಬಗ್ಗೆ ಹಂಚಿಕೊಂಡಿದ್ದಾರೆ. ಏರ್‌ಬಿಎನ್‌ಬಿಯಲ್ಲಿ ಬಾಡಿಗೆಗೆ ಕೊಠಡಿಗಳನ್ನು ಕಾಯ್ದಿರಿಸುವ ಮೂಲಕ ಉಕ್ರೇನ್‌ಗೆ ಬೆಂಬಲ ನೀಡುವ ಕಲ್ಪನೆಯನ್ನು ಹಂಚಿಕೊಂಡಿದ್ದೇನೆ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಮಾಡಿದ 24 ಗಂಟೆಗಳ ನಂತರ, 100 ಜನರು ಉಕ್ರೇನ್‌ನಲ್ಲಿ ಏರ್ ಬಿಎನ್‌ಬಿಗಳನ್ನು ಬುಕ್ ಮಾಡುತ್ತಿದ್ದಾರೆ. ಇದು ಕಠಿಣವಾದ ಪ್ರದೇಶಗಳಲ್ಲಿನ ಜನರಿಗೆ ತಕ್ಷಣ ವಿತ್ತೀಯ ಸಹಾಯವನ್ನು ಕಳುಹಿಸುವ ಮಾರ್ಗವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಇಂತಹ ಕ್ರಮವನ್ನು ಕಂಡು ನಿಜಕ್ಕೂ ಸುಂದರ ಕಲ್ಪನೆ ಎಂದು ಹೇಳಿದ್ದಾರೆ.