alex Certify ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಬಳಿ ಬೆಂಬಲ ಕೋರಿದ ಉಕ್ರೇನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಬಳಿ ಬೆಂಬಲ ಕೋರಿದ ಉಕ್ರೇನ್

ರಷ್ಯಾವು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಕ್ರೇನ್​​ ಸಹಾಯಕ್ಕಾಗಿ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾದ ಪ್ರಧಾನಿ ಮೋದಿಗೆ ಮನವಿ ಮಾಡಿದೆ.

ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ ಗೌರವಾನ್ವಿತ ನಾಯಕರಲ್ಲಿ ಒಬ್ಬರಾಗಿದ್ದಾರೆ. ನೀವು ರಷ್ಯಾದ ಜೊತೆಯಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದೀರಿ ಎಂದು ಭಾರತದ ಉಕ್ರೇನ್​ ರಾಯಭಾರಿ ಪೊಲಿಖಾ ಹೇಳಿದ್ದಾರೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಭಾರತ ಸರ್ಕಾರದಿಂದ ಹೆಚ್ಚು ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಪೊಲಿಖಾ ಮನವಿ ಮಾಡಿದರು.

ಇದು ಮುಂಜಾನೆ 5 ಗಂಟೆಯಿಂದ ಆರಂಭವಾದ ಅಸ್ಪಷ್ಟ ಆಕ್ರಮಣವಾಗಿದೆ. ಉಕ್ರೇನ್​ನಲ್ಲಿ ಮಿಲಿಟರಿ ವಿಮಾನ ನಿಲ್ದಾಣಗಳು, ಮಿಲಿಟರಿ ಇನ್​ಸ್ಟಾಲೇಷನ್​ಗಳ ಮೇಲೆ ಬಾಂಬ್​​ ಹಾಗೂ ಕ್ಷಿಪಣಿ ದಾಳಿ ಮಾಡಲಾಗಿದೆ ಎಂದು ಪೊಲಿಖಾ ಮಾಹಿತಿ ನೀಡಿದರು.

ಕೆಲವು ದಾಳಿಗಳನ್ನು ರಾಜಧಾನಿಯ ಹೊರವಲಯದಲ್ಲಿ ನಡೆಸಲಾಗಿದೆ. ಕೆಲವು ದಾಳಿಗಳನ್ನು ಉಕ್ರೇನ್​ನ ಗಡಿ ಪ್ರದೇಶದ ಒಳಗಡೆಯೇ ನಡೆದಿದೆ. ನಮ್ಮ ಸೈನಿಕರು ಹಾಗೂ ನಾಗರಿಕರ ಸಾವು – ನೋವುಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...