ಹೊರಗಡೆ ಬಾಂಬ್ ಸ್ಫೋಟದ ಬಳಿಕ ಮಾರಿಯುಪೋಲ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕಾಲೇಜು ವಿದ್ಯಾರ್ಥಿಗಳು ಶಾಂತಿಗಾಗಿ ಸಂಗೀತವನ್ನು ನುಡಿಸಿದ್ದಾರೆ.
ರಷ್ಯಾದ ಸೇನೆಯು ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿವೆ. ಮಾರಿಯುಪೋಲ್ನಿಂದ 14 ಗಂಟೆಗೆ ದೀರ್ಘ ಪ್ರಯಾಣದ ಹೊಂದಿರುವ ಕೈವ್ನ್ನು ತಲುಪಲು ವಿದ್ಯಾರ್ಥಿಗಳು ರೈಲಿನಲ್ಲಿ ಬಂದಿದ್ದರು. ಆದರೆ ಈ ಕಠಿಣ ಪರಿಸ್ಥಿತಿಯಲ್ಲಿ ರೈಲು ಚಲಿಸುವುದು ಸಾಧ್ಯವಾಗದೇ ವಿದ್ಯಾರ್ಥಿಗಳು ಗಿಟಾರ್ ನುಡಿಸಿದ್ದಾರೆ.
ರಷ್ಯಾದ ದಾಳಿಯ ಬಳಿಕ ಗಂಭೀರ ಸ್ಥಿತಿಯಲ್ಲಿರುವ ಉಕ್ರೇನ್ ರಾಜಧಾನಿ ಕೈವ್ಗೆ ರೈಲು ಪ್ರಾರಂಭವಾಗುವವರೆಗೆ ಕಾದು ಕುಳಿತಿದ್ದ ಕಾಲೇಜು ವಿದ್ಯಾರ್ಥಿಗಳಾದ ದರ್ಯಾ ಹಾಗೂ ಪಾಶಾ ಗಿಟಾರ್ ನುಡಿಸಿ ಹಾಡುಗಳನ್ನು ಹಾಡಿದರು. ತಮ್ಮ ಗಿಟಾರ್ ಹಾಗೂ ಸಂಗೀತದ ನಡುವೆ ಅವರು ಈ ಒತ್ತಡವನ್ನು ನಿಭಾಯಿಸಲು ಯತ್ನಿಸುತ್ತಿದ್ದರು.
ಉಕ್ರೇನ್ ಮತ್ತು ರಷ್ಯಾ ಮಾತುಕತೆಗೆ ಸಮಯ ಮತ್ತು ಸ್ಥಳದ ಕುರಿತು ಮುಂಬರುವ ಗಂಟೆಗಳಲ್ಲಿ ಸಮಾಲೋಚನೆ ನಡೆಸಲಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ವಕ್ತಾರ ಸೆರ್ಗಿ ನೈಕಿಫೊರೊವ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಆಕ್ರಮಣ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಾಜತಾಂತ್ರಿಕತೆಯ ಭರವಸೆಯ ಮೂಡಿದೆ.