
ಉಕ್ರೇನ್ನ ಈಶಾನ್ಯ ಭಾಗದಲ್ಲಿರುವ ಸುಮಿಯಲ್ಲಿ ಇನ್ನೂ ಭಾರತೀಯರು ಸಿಲುಕಿಕೊಂಡಿದ್ದಾರೆ. ಇವರನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿದರು.
ವಿದ್ಯಾರ್ಥಿಗಳು ಹೋಟೆಲ್ನಿಂದ ಬುಡಾಪೆಸ್ಟ್ ವಿಮಾನ ನಿಲ್ದಾಣಕ್ಕೆ ಬಸ್ನ ಮೂಲಕ ಬಂದಿಳಿದರು. ಪ್ರತಿಯೊಬ್ಬರ ಕೈಯಲ್ಲೂ ತ್ರಿವರ್ಣ ಧ್ಚಜವು ಕಾಣುತ್ತಿತ್ತು. ಪ್ರತಿಯೊಬ್ಬರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಈ ಸ್ನೇಹ ಮುಂದುವರಿಸೋಣ ಎಂದು ಪ್ರತಿಜ್ಞೆ ಮಾಡಿದರು.
ಇಲ್ಲಿಯವರೆಗೆ ರೋಮಾನಿಯಾ ಗಡಿಯಿಂದ 6680 ಭಾರತೀಯರನ್ನು ರಕ್ಷಿಸಲಾಗಿದೆ. ಪೋಲೆಂಡ್ನಿಂದ 2822, ಹಂಗೇರಿಯಿಂದ 5300 ಹಾಗೂ ಸ್ಲೋವಾಕಿಯಾದಿಂದ 1118 ಮಂದಿ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.