alex Certify ಉಂಗುರ ಕಳುವಾದ್ರೆ ಈ ಗ್ರಹ ದೋಷ ಕಾಡುತ್ತೆ ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಂಗುರ ಕಳುವಾದ್ರೆ ಈ ಗ್ರಹ ದೋಷ ಕಾಡುತ್ತೆ ಎಚ್ಚರ….!

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಭತ್ತು ಗ್ರಹಗಳಿವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು-ಕೇತು ಒಂಭತ್ತು ಗ್ರಹಗಳು.

ಸೂರ್ಯನನ್ನು ಗ್ರಹಗಳ ರಾಜ ಎನ್ನಲಾಗುತ್ತದೆ. ಈ ಗ್ರಹದಲ್ಲಾಗುವ ಏರುಪೇರು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ.

ಹಣ ಹಂಚಿಕೆ ಆರೋಪ ಪ್ರೂವ್​ ಮಾಡಿ ಎಂದ ಬಿಜೆಪಿ ನಾಯಕರಿಗೆ ಡಿಕೆಶಿ ಖಡಕ್​ ಉತ್ತರ

ಈ ಗ್ರಹ ಮಾನ-ಸನ್ಮಾನ, ಪ್ರಸಿದ್ಧಿ, ಭಾಗ್ಯಕಾರಕವಾಗಿರುತ್ತದೆ. ಜಾತಕದಲ್ಲಿ ಈ ಗ್ರಹ ಅಶುಭವಾಗಿದ್ದರೆ ಚಿನ್ನದಿಂದ ಮಾಡಿದ ಉಂಗುರ ಅಥವಾ ಚಿನ್ನಾಭರಣ ಕಳ್ಳತನವಾಗಬಹುದು ಅಥವಾ ಕಳೆದು ಹೋಗಬಹುದು. ಜ್ಯೋತಿಷಿಗಳ ಪ್ರಕಾರ ಸೂರ್ಯ ಜಾತಕದಲ್ಲಿ ಮಂಗಳಕರವಾಗಿಲ್ಲವಾದ್ರೆ ದೈನಂದಿನ ಜೀವನದಲ್ಲಿ ಈ ಬಗ್ಗೆ ಸೂಚನೆ ಸಿಗುತ್ತದೆ.

ಉಂಗುರ, ಚಿನ್ನಾಭರಣ ಕಳೆದು ಹೋಗುವುದು ಅಥವಾ ಕಳ್ಳತನವಾಗುವಂತಹ ಘಟನೆ ನಡೆದ್ರೆ ಜಾತಕದಲ್ಲಿ ಸೂರ್ಯ ಅಶುಭನಾಗಿದ್ದಾನೆಂದು ಅರ್ಥ ಮಾಡಿಕೊಳ್ಳಿ. ಹಾಗೆ ಗುರು ಹಾಗೂ ತಂದೆಯ ನೆರವು ಸಿಗುವುದಿಲ್ಲ. ಕಾನೂನು ಕೆಲಸದಲ್ಲಿ ತೊಂದರೆ ಎದುರಾಗುತ್ತದೆ. ನೌಕರಿಯಲ್ಲಿ ಕಷ್ಟಪಟ್ಟರೂ ಫಲ ಸಿಗುವುದಿಲ್ಲ. ಬೆಳಿಗ್ಗೆ ತುಂಬಾ ಹೊತ್ತು ಹಾಸಿಗೆ ಮೇಲಿರುವ ಜೊತೆಗೆ ಆಲಸ್ಯ ಮನೆ ಮಾಡಿರುತ್ತದೆ. ಮುಖದ ಮೇಲೆ ಎಂದೂ ಒತ್ತಡ ಕಾಣಿಸಿಕೊಳ್ಳುತ್ತದೆ. ಕಣ್ಣು ಹೊಳಪು ಕಳೆದುಕೊಳ್ಳುತ್ತದೆ.

ದೀಪಾವಳಿಯ ಲಕ್ಷ್ಮಿ ಪೂಜೆಗೂ ಮುನ್ನ ಸ್ವಚ್ಛಗೊಳಿಸಿ ಮನೆಯ ಈ ಜಾಗ

ಇದ್ರಿಂದ ದೌರ್ಭಾಗ್ಯ ನಿಮ್ಮನ್ನು ಹಿಂಬಾಲಿಸುತ್ತದೆ. ಹಾಗಾಗಿ ಬೆಳಿಗ್ಗೆ ಬೇಗ ಎದ್ದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದ್ರಿಂದ ಸೂರ್ಯ ನೀಡುವ ಅಶುಭ ಫಲ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...