ಷೇರು ಹೂಡಿಕೆದಾರರಿಗೆ ಖುಷಿ ಕೊಡುವಂಥ ಸುದ್ದಿ ಇದು. ನೀವೇನಾದ್ರೂ ಆರ್ಕಿಯನ್ ಕೆಮಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ IPO ನಲ್ಲಿ ಹೂಡಿಕೆ ಮಾಡಿದ್ದರೆ ಗುಡ್ ನ್ಯೂಸ್ ಕಾದಿದೆ. ಆರ್ಕಿಯನ್ ಕೆಮಿಕಲ್‌ನ IPO ನವೆಂಬರ್ 9 ರಿಂದ 11 ರವರೆಗೆ ಹೂಡಿಕೆದಾರರಿಗಾಗಿ ತೆರೆದಿತ್ತು. ಇದೀಗ ಅದರಲ್ಲಿ ಹೂಡಿಕೆ ಮಾಡುವವರ ಚಿತ್ತ ಷೇರುಗಳ ಹಂಚಿಕೆಯತ್ತ ನೆಟ್ಟಿದೆ.
ಈ ಕಂಪನಿಯ IPOನಲ್ಲಿ ಹೂಡಿಕೆ ಮಾಡುವವರಿಗಾಗಿ ನವೆಂಬರ್ 16ರಂದು ಷೇರುಗಳ ಹಂಚಿಕೆ ಮಾಡಲಾಗ್ತಿದೆ. ಈ IPO ಮೇಲೆ ಬೆಟ್ಟಿಂಗ್ ಮಾಡುವವರಿಗೆ ಗ್ರೇ ಮಾರುಕಟ್ಟೆಯಲ್ಲಿ ಒಳ್ಳೆಯ ಸುದ್ದಿ ಇದೆ. ಯಾಕಂದ್ರೆ ಈಗಾಗ್ಲೇ ಆರ್ಕಿಯನ್ ಷೇರು ಗ್ರೇ ಮಾರ್ಕೆಟ್‌ನಲ್ಲಿ 85 ರೂಪಾಯಿ ಪ್ರೀಮಿಯಂನೊಂದಿಗೆ ವಹಿವಾಟು ನಡೆಸುತ್ತಿದೆ.
ಬೆಲೆ 20 ಪ್ರತಿಶತದಷ್ಟು ವೇಗ ಹೆಚ್ಚಿಸುವ ಸಾಧ್ಯತೆ
ಆರ್ಕಿಯನ್ ಕೆಮಿಕಲ್‌ನ IPO ಬೆಲೆ 407 ರೂಪಾಯಿ ಇದೆ. ಗ್ರೇ ಮಾರ್ಕೆಟ್‌ನಲ್ಲಿ 85 ರೂಪಾಯಿಯ ರ್ಯಾಲಿ ಮುಂದುವರಿದರೆ, ಈ ಷೇರನ್ನು (407+85) ಅಂದರೆ 492ಕ್ಕೆ ಲಿಸ್ಟ್ ಮಾಡಬಹುದು. ಇದರರ್ಥ ಷೇರುಗಳು IPOದ ಬೆಲೆಗಿಂತ 20 ಪ್ರತಿಶತದಷ್ಟು ಲಾಭ ಪಡೆಯುವ ಸಾಧ್ಯತೆಯಿದೆ. ಈ IPOದ ಬೆಲೆ 386 ರಿಂದ 407 ರೂಪಾಯಿವರೆಗೆ ಇತ್ತು. ಗ್ರೇ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ ತಜ್ಞರ ಪ್ರಕಾರ, ಆರ್ಕಿಯನ್ ಕೆಮಿಕಲ್ IPOನ GMP ಪ್ರತಿ ಷೇರಿಗೆ 85 ರೂಪಾಯಿಯಿದ್ದು, ಅದು ಏರುತ್ತಲೇ ಇದೆ. ಈ ಐಪಿಒದಲ್ಲಿ ಹೂಡಿಕೆ ಮಾಡುವವರು ಉತ್ತಮ ಆದಾಯವನ್ನು ಪಡೆಯಬಹುದು ಎಂದು ತಜ್ಞರು ಭರವಸೆ ನೀಡಿದ್ದಾರೆ.