ಮಹಾಭಾರತದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಲಾಗಿದೆ. ಅದು ಈಗಿನ ಕಾಲಕ್ಕೂ ಅನ್ವಯಿಸುವಂತಹದ್ದು. ಅದ್ರಲ್ಲಿ ಗುಪ್ತ ವಿಷಯಗಳನ್ನು ಯಾರಿಗೆ ಹೇಳಬಾರದು ಎಂಬುದನ್ನೂ ಹೇಳಲಾಗಿದೆ. ಕೆಲ ವ್ಯಕ್ತಿಗಳಿಗೆ ಗುಪ್ತ ವಿಷಯಗಳನ್ನು ಹೇಳಿದ್ರೆ ಸಹಾಯವಾಗುವ ಬದಲು ಅಪಾಯವಾಗಬಹುದೆಂದು ಮಹಾಭಾರತದಲ್ಲಿ ಹೇಳಲಾಗಿದೆ.
ಮಹಿಳೆಯರ ಬಾಯಲ್ಲಿ ಗುಟ್ಟು ನಿಲ್ಲೋದಿಲ್ಲ ಎನ್ನುವ ಒಂದು ಮಾತಿದೆ. ತಮಗೆ ತಿಳಿದ ತಕ್ಷಣ ಅದನ್ನು ಬೇರೆಯವರಿಗೆ ಹೇಳಬೇಕೆಂದು ಹಾತೊರೆಯುವುದು ಸಾಮಾನ್ಯವಾಗಿ ಕೆಲ ಮಹಿಳೆಯ ಸ್ವಭಾವ. ಹಾಗಾಗಿ ಎಲ್ಲವನ್ನೂ ಇಂತಹ ಚಂಚಲ ಮನಸ್ಸುಳ್ಳ ಮಹಿಳೆಯರ ಮುಂದೆ ಹೇಳುವುದು ಉತ್ತಮವಲ್ಲ.
ಮೂರ್ಖ ವ್ಯಕ್ತಿಯ ಮುಂದೆಯೂ ಎಲ್ಲವನ್ನು ಹೇಳುವುದು ಸರಿಯಲ್ಲ. ಒಳ್ಳೆಯದು-ಕೆಟ್ಟದ್ದು, ಶತ್ರು-ಮಿತ್ರ ಇದ್ಯಾವುದರ ವ್ಯತ್ಯಾಸವೂ ತಿಳಿಯದ ವ್ಯಕ್ತಿ ಮುಂದೆ ಗುಟ್ಟು ಹೇಳಿದ್ರೆ ಅದು ಶತ್ರುವಿನ ಕಿವಿ ತಲುಪುವ ಸಾಧ್ಯತೆ ಜಾಸ್ತಿ ಇರುತ್ತದೆ.
ಮಕ್ಕಳಿಗೆ ಒಳ್ಳೆಯ–ಕೆಟ್ಟ ವಿಷಯಗಳ ಬಗ್ಗೆ ತಿಳಿದಿರುವುದಿಲ್ಲ. ಯಾವುದನ್ನು ಯಾರ ಮುಂದೆ ಹೇಳಬೇಕೆನ್ನುವುದು ಮಕ್ಕಳಿಗೆ ಗೊತ್ತಿರುವುದಿಲ್ಲ. ಮಕ್ಕಳಿಗೆ ಗೊತ್ತಾದ ಗುಟ್ಟು ನಿಮಗೆ ಆಪತ್ತು ತರಬಹುದು.
ದುರಾಸೆಯ ವ್ಯಕ್ತಿಗೂ ಎಲ್ಲ ವಿಷಯವನ್ನು ಹೇಳದಿರುವುದು ಒಳಿತು. ತನ್ನ ಸ್ವಾರ್ಥಕ್ಕಾಗಿ ಆತ ಏನು ಬೇಕಾದ್ರೂ ಮಾಡಬಲ್ಲ. ನಿಮ್ಮ ಶತ್ರುವಲ್ಲದಿದ್ದರೂ ನಿಮ್ಮ ಗುಟ್ಟನ್ನು ಬೇರೆಯವರಿಗೆ ಹೇಳಿ ಲಾಭ ಪಡೆಯುವ ಸಾಧ್ಯತೆ ಇದೆ.
ನೀಚ, ಕೆಟ್ಟ ಕೆಲಸ ಮಾಡುವ ವ್ಯಕ್ತಿ ಬಗ್ಗೆ ನಿಮಗೆ ವಿವರಿಸಿ ಹೇಳಬೇಕಾಗಿಲ್ಲ. ತನಗಾಗಿ ಆತ ಕೆಟ್ಟ ಕೆಲಸ ಮಾಡಲು ಸಿದ್ಧನಿರುವ ಆತನಿಂದ ಆದಷ್ಟು ದೂರ ಇರುವುದು ಲೇಸು.
ಹುಚ್ಚಾಟದ ವ್ಯಕ್ತಿ. ಆತ ನಿಜವಾಗಿ ಹುಚ್ಚನಲ್ಲ. ಆದ್ರೆ ಉದ್ವೇಗಕ್ಕೆ ಒಳಗಾಗಿ ಮಾಡಬಾರದ ಕೆಲಸ ಮಾಡಿಬಿಡುತ್ತಾನೆ.