alex Certify ಈ 5 ಹಣ್ಣುಗಳ ಸೇವನೆಯಿಂದ ನಿವಾರಣೆಯಾಗುತ್ತೆ ಸಂಧಿವಾತದ ಸಮಸ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 5 ಹಣ್ಣುಗಳ ಸೇವನೆಯಿಂದ ನಿವಾರಣೆಯಾಗುತ್ತೆ ಸಂಧಿವಾತದ ಸಮಸ್ಯೆ….!

ಸಂಧಿವಾತವು ಮಾನವರ ದೇಹದ ಕೀಲುಗಳಲ್ಲಿ ನೋವು, ಊತ ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಈ ರೋಗವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದರೆ ಜಡವಾದ ಜೀವನ ಶೈಲಿ ಮತ್ತು ಇತರ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಧಿವಾತ ಪ್ರಾರಂಭವಾಗಬಹುದು.ಸಂಧಿವಾತದ ಸಮಸ್ಯೆಗೆ 5 ಹಣ್ಣುಗಳಲ್ಲಿ ಪರಿಣಾಮಕಾರಿ ಮದ್ದಿದೆ. ಇವು ಸಂಧಿವಾತದ ನೋವನ್ನು ನಿವಾರಿಸಲು ಸಹಾಯ ಮಾಡುತ್ತವೆ.

ಸೇಬು: ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸೇಬು ಸಹಾಯಕಾರಿ ಎಂದು ಪರಿಗಣಿಸಲಾಗಿದೆ. ಈ ಹಣ್ಣುಗಳಲ್ಲಿ ಫೈಬರ್‌ ಸಮೃದ್ಧವಾಗಿದ್ದು, ರಕ್ತದಿಂದ ಹೆಚ್ಚಿನ ಪ್ರಮಾಣದ ಯೂರಿಕ್ ಆಮ್ಲವನ್ನು ಹೀರಿಕೊಳ್ಳುತ್ತದೆ.

ಚೆರ್ರಿ: ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಚೆರ್ರಿ ಹಣ್ಣುಗಳು ಉತ್ತಮ ಆಯ್ಕೆಯಾಗಿದೆ. ಚೆರ್ರಿಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಇವು ಹೆಚ್ಚುವರಿ ಯೂರಿಕ್ ಆಮ್ಲದ ಮಟ್ಟದಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕೀಲು ನೋವನ್ನು ನಿವಾರಿಸುತ್ತವೆ.

ಪೇರಲೆ: ಕೀಲು ನೋವನ್ನು ಕಡಿಮೆ ಮಾಡಲು ಪೇರಲೆ ತುಂಬಾ ಉಪಯುಕ್ತವಾಗಿದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಕಾರಿ ಪದಾರ್ಥಗಳನ್ನು ಹೊಂದಿರುತ್ತದೆ. ಅದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಕಿವಿ: ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿವೆ. ಇದು ಸಂಧಿವಾತದ ಕೀಲುಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ನಿಮ್ಮ ಕೀಲುಗಳನ್ನು ಬಲಪಡಿಸುವ ಪ್ರೋಟೀನ್ ಅನ್ನು ಸಹ ಇದು ಹೊಂದಿದೆ.

ಮಾವಿನ ಹಣ್ಣು: ಸಂಧಿವಾತದ ಸಮಸ್ಯೆ ಇರುವವರು ಮಾವಿನ ಹಣ್ಣನ್ನು ಸೇವಿಸಬೇಕು. ಇದರಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕ ಅಂಶಗಳು ಮತ್ತು ಕ್ಯಾರೋಟಿನ್ ಇದ್ದು, ಇವು ಉರಿಯೂತವನ್ನು ಕಡಿಮೆ ಮಾಡುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...