ದಾಲ್ಚಿನ್ನಿಅತ್ಯುತ್ತಮ ರುಚಿ ಮತ್ತು ಸುವಾಸನೆಗೆ ಹೆಸರುವಾಸಿಯಾಗಿರುವ ಮಸಾಲೆ ಪದಾರ್ಥ. ಅನೇಕ ತಿನಿಸುಗಳ ರುಚಿ ಮತ್ತು ಘಮವನ್ನು ಹೆಚ್ಚಿಸಲು ದಾಲ್ಚಿನ್ನಿಯನ್ನು ಬಳಸಲಾಗುತ್ತದೆ. ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಸೇರಿದಂತೆ ಉತ್ಕರ್ಷಣ ನಿರೋಧಕಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಪ್ರತಿದಿನ ಒಂದು ಲೋಟ ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.
ಜೀರ್ಣಕ್ರಿಯೆ ಸುಧಾರಣೆ – ನೈಸರ್ಗಿಕ ಜೀರ್ಣಕಾರಿ ಗುಣಗಳು ದಾಲ್ಚಿನ್ನಿಯಲ್ಲಿ ಕಂಡುಬರುತ್ತವೆ. ಇದು ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ, ಗ್ಯಾಸ್, ವಾಯು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ಗುಣಪಡಿಸಬಹುದು.
ನೆನೆಪಿನ ಶಕ್ತಿ ಹೆಚ್ಚಳ – ಪ್ರತಿದಿನ ದಾಲ್ಚಿನ್ನಿ ನೀರನ್ನು ಕುಡಿಯುತ್ತಿದ್ದರೆ ಮೆದುಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಅದು ಸಹಾಯ ಮಾಡುತ್ತದೆ. ಇದು ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಸ್ಮರಣೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ದಾಲ್ಚಿನ್ನಿ ಕಷಾಯ ಸೇವನೆಯಿಂದ ಆಲ್ಝೈಮರ್‌ನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.
ಹೃದಯದ ಆರೋಗ್ಯ – ದಾಲ್ಚಿನ್ನಿ ನೀರನ್ನು ನಿಯಮಿತವಾಗಿ ಕುಡಿದರೆ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಟ್ಟದಲ್ಲಿರುತ್ತದೆ. ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಹೃದಯದ ಆರೋಗ್ಯವು ಸುಧಾರಿಸುತ್ತದೆ ಮತ್ತು ಹೃದಯಾಘಾತದಂತಹ ಗಂಭೀರ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ – ದಾಲ್ಚಿನ್ನಿಯಲ್ಲಿ ಎಂಟಿಮೈಕ್ರೊಬಿಯಲ್ ಮತ್ತು ಎಂಟಿವೈರಲ್ ಗುಣಲಕ್ಷಣಗಳು ಕಂಡುಬರುತ್ತವೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಕೆಮ್ಮು, ಜ್ವರದಂತಹ ವೈರಲ್ ರೋಗಗಳ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ – ದಾಲ್ಚಿನ್ನಿ ನೀರು ಉರಿಯೂತವನ್ನು ಕಡಿಮೆ ಮಾಡಬಲ್ಲದು. ಆರೋಗ್ಯಕರ ಮೈಬಣ್ಣವನ್ನು ಉತ್ತೇಜಿಸುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮೊಡವೆ ಸೇರಿದಂತೆ ಹಲವು ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.