ಪ್ರತಿಯೊಬ್ಬರದ್ದೂ ಈಗ ಬ್ಯುಸಿ ಲೈಫ್. ಪ್ರತಿದಿನ ಅಡುಗೆ ಮಾಡೋದು ಅಥವಾ ಮಾಡಿದ ಅಡುಗೆಯನ್ನು ಬಿಸಿಯಾಗಿ ತಿನ್ನಲೂ ಸಮಯ ಇರುವುದಿಲ್ಲ. ಅನೇಕ ಬಾರಿ ಅಡುಗೆ ಮಾಡಿದ ನಂತರ ಅದನ್ನು ಬಿಸಿಯಾಗಿ ತಿನ್ನಲು ಸಾಧ್ಯವಾಗದೇ ಹಾಗೆಯೇ ಫ್ರಿಡ್ಜ್ನಲ್ಲಿ ಇಡುತ್ತಾರೆ. ಮಾರನೇ ದಿನ ಅದನ್ನೇ ಮತ್ತೆ ಬಿಸಿ ಮಾಡಿಕೊಂಡು ತಿನ್ನುತ್ತೇವೆ.
ಕೆಲವರು ನಿನ್ನೆ ಉಳಿದ ಆಹಾರವನ್ನು ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಈ ರೀತಿ ಮಾಡುವುದು ನಮಗೆಲ್ಲ ಸಾಮಾನ್ಯವೆಂದು ತೋರುತ್ತದೆ, ಆದರೆ ಈ ಅಭ್ಯಾಸವು ಆರೋಗ್ಯಕ್ಕೆ ಒಳ್ಳೆಯದಲ್ಲ.
ಕೆಲವು ಆಹಾರಗಳನ್ನು ಮತ್ತೆ ಬಿಸಿ ಮಾಡಿದಾಗ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ. ಇವುಗಳನ್ನು ತಿನ್ನುವುದರಿಂದ ಪ್ರಯೋಜನಕ್ಕೆ ಬದಲಾಗಿ ಹಾನಿ ಉಂಟಾಗುತ್ತದೆ. ನಿರ್ದಿಷ್ಟ 5 ಆಹಾರ ಪದಾರ್ಥಗಳನ್ನಂತೂ ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಬಾರದು.
ಆಲೂಗಡ್ಡೆ – ಆಲೂಗೆಡ್ಡೆಗಳು ಪಿಷ್ಟವನ್ನು ಹೊಂದಿರುತ್ತವೆ. ಇದು ಮತ್ತೆ ಬಿಸಿ ಮಾಡಿದಾಗ ಒಡೆಯುತ್ತದೆ ಮತ್ತು ವಿಷವನ್ನು ಉತ್ಪಾದಿಸಬಹುದು. ಈ ವಿಷ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬಹುದು.
ಮೊಟ್ಟೆ – ಮೊಟ್ಟೆಗಳು ಪ್ರೋಟೀನ್ ಅನ್ನು ಹೊಂದಿರುತ್ತವೆ. ಇದು ಮತ್ತೆ ಬಿಸಿ ಮಾಡಿದಾಗ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತದೆ. ಈ ಬ್ಯಾಕ್ಟೀರಿಯಾಗಳು ಆಹಾರ ವಿಷಮಯ ಮಾಡುತ್ತವೆ. ಪರಿಣಾಮ ಅತಿಸಾರ, ಹೊಟ್ಟೆ ನೋವು ಮತ್ತು ಜ್ವರ ಬರುವ ಸಾಧ್ಯತೆ ಇರುತ್ತದೆ.
ಸೊಪ್ಪು – ಪಾಲಕ್ ಸೊಪ್ಪಿನಿಂದ ತಯಾರಿಸಿದ ತಿನಿಸುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಬಾರದು. ಏಕೆಂದರೆ ಪಾಲಕ್ ನೈಟ್ರೇಟ್ ಅನ್ನು ಹೊಂದಿರುತ್ತದೆ, ಇದು ಮತ್ತೆ ಬಿಸಿ ಮಾಡಿದಾಗ ನೈಟ್ರೊಸಮೈನ್ ಆಗಿ ಬದಲಾಗುತ್ತದೆ. ನೈಟ್ರೋಸಮೈನ್ ಒಂದು ಕ್ಯಾನ್ಸರ್ ಕಾರಕ. ಪಾಲಕದಲ್ಲಿ ನೈಟ್ರೇಟ್ ಅಂಶವು ಸಾಮಾನ್ಯವಾಗಿ ಕಡಿಮೆ ಇರುತ್ತದೆ, ಆದರೆ ಅದನ್ನು ಮತ್ತೆ ಬಿಸಿ ಮಾಡಿದಾಗ, ಅದು ನೈಟ್ರೊಸಮೈನ್ಗಳಾಗಿ ಪರಿವರ್ತನೆಗೊಳ್ಳುತ್ತದೆ. ನೈಟ್ರೊಸಮೈನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹೊಟ್ಟೆ, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.
ಚಿಕನ್ – ಚಿಕನ್ ಅನ್ನು ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಅದರ ಪ್ರೋಟೀನ್ ಒಡೆಯುತ್ತದೆ ಮತ್ತು ವಿಭಿನ್ನ ರೂಪವನ್ನು ಪಡೆಯುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅನೇಕ ಸಂದರ್ಭಗಳಲ್ಲಿ ಅಡುಗೆ ಮಾಡಿದ ನಂತರವೂ ಚಿಕನ್ನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಉಳಿಯುತ್ತವೆ. ಬೇಯಿಸಿದ ಚಿಕನ್ ಅನ್ನು ಮೈಕ್ರೋವೇವ್ನಲ್ಲಿ ಇರಿಸಿದರೆ, ಬ್ಯಾಕ್ಟೀರಿಯಾವು ಮಾಂಸದಾದ್ಯಂತ ಹರಡಬಹುದು.
ಅನ್ನ – ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಆಹಾರ ಇದು. ಆದರೆ ಅನ್ನವನ್ನು ಪದೇ ಪದೇ ಬಿಸಿ ಮಾಡಿ ಸೇವಿಸಬಾರದು. ಅನೇಕ ಮನೆಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಒಮ್ಮೆಲೇ ಅನ್ನ ಬೇಯಿಸುತ್ತಾರೆ. ರಾತ್ರಿ ಅದನ್ನು ಮತ್ತೊಮ್ಮೆ ಬಿಸಿ ಮಾಡಿ ತಿನ್ನುತ್ತಾರೆ. ತಣ್ಣನೆಯ ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಆಹಾರ ವಿಷವಾಗಬಹುದು. ಒಲೆಯಿಂದ ತೆಗೆದ ನಂತರ ಅನ್ನವನ್ನು ಹಾಗೇ ಬಿಟ್ಟರೆ ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯಬಹುದು.