alex Certify ಈ ಹಸಿರು ಎಲೆಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಿರಿ: ಕಿಡ್ನಿ ಸ್ಟೋನ್ ಮತ್ತು ಮೈಗ್ರೇನ್‌ನಿಂದ ಪಡೆಯಬಹುದು ಮುಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಸಿರು ಎಲೆಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಿರಿ: ಕಿಡ್ನಿ ಸ್ಟೋನ್ ಮತ್ತು ಮೈಗ್ರೇನ್‌ನಿಂದ ಪಡೆಯಬಹುದು ಮುಕ್ತಿ…!

ಹಾಲು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ಹಾಲು ಸಂಪೂರ್ಣ ಆಹಾರ, ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಲಿನ ಪ್ರಯೋಜನಗಳನ್ನು ಹೆಚ್ಚಿಸಲು ನಾವು ಅದರಲ್ಲಿ ಅನೇಕ ವಸ್ತುಗಳನ್ನು ಮಿಶ್ರಣ ಮಾಡುತ್ತೇವೆ.

ಅವುಗಳಲ್ಲೊಂದು ತುಳಸಿ ಎಲೆಗಳು. ತುಳಸಿ ಎಲೆಗಳು ಔಷಧೀಯ ಗುಣಗಳಿಂದ ತುಂಬಿವೆ. ಬಹುತೇಕ ಎಲ್ಲಾ ಮನೆಗಳಲ್ಲೂ ತುಳಸಿ ಗಿಡ ಬೆಳೆಸಲಾಗುತ್ತದೆ. ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ಅನೇಕ ರೋಗಗಳನ್ನು ಗುಣಪಡಿಸಬಹುದು.

ಅಸ್ತಮಾ: ಅಸ್ತಮಾ ಅಥವಾ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ತುಳಸಿ ರಾಮಬಾಣ. ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ಅಸ್ತಮಾ ರೋಗಿಗೆ ಸಾಕಷ್ಟು ರಿಲೀಫ್‌ ಸಿಗುತ್ತದೆ.

ಮೈಗ್ರೇನ್: ಪ್ರಸ್ತುತ ಯುಗದಲ್ಲಿ ಮೈಗ್ರೇನ್ ರೋಗಿಗಳ ಸಂಖ್ಯೆಯು ಬಹಳಷ್ಟು ಹೆಚ್ಚಾಗಿದೆ.  ಜನರು ತಲೆನೋವಿನಿಂದ ಸಾಕಷ್ಟು ತೊಂದರೆಗೊಳಗಾಗುತ್ತಾರೆ. ಹಾಲಿಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿಕೊಂಡು ನಿಯಮಿತವಾಗಿ ಸೇವಿಸಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು.

ಖಿನ್ನತೆ: ಬಿಡುವಿಲ್ಲದ ಜೀವನಶೈಲಿ, ಕಚೇರಿ ಕೆಲಸದ ಹೊರೆ, ಕೌಟುಂಬಿಕ ವೈಷಮ್ಯ, ಪ್ರೀತಿ ಮತ್ತು ಸ್ನೇಹದಲ್ಲಿ ದ್ರೋಹ, ಸಾಲ ಹೀಗೆ ಅನೇಕ ಕಾರಣದಿಂದ ಜನರು ಖಿನ್ನತೆಗೆ ಒಳಗಾಗುತ್ತಾರೆ. ಈ ಸಮಸ್ಯೆಗೂ ತುಳಸಿ ಮತ್ತು ಹಾಲಿನಲ್ಲಿ ಪರಿಹಾರವಿದೆ. ಹಾಲಿಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿಕೊಂಡು ಕುಡಿಯುವುದರಿಂದ ಉದ್ವೇಗ ನಿವಾರಣೆಯಾಗುತ್ತದೆ. ಎಲ್ಲಾ ರೀತಿಯ ಚಿಂತೆಗಳು ದೂರವಾಗುತ್ತವೆ, ಖಿನ್ನತೆಗೂ ಇದು ಪರಿಹಾರ ನೀಡುತ್ತದೆ.

ಕಿಡ್ನಿ ಕಲ್ಲು: ಇತ್ತೀಚಿನ ದಿನಗಳಲ್ಲಿ ಕಲುಷಿತ ಆಹಾರ ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಸಾಕಷ್ಟು ಹೆಚ್ಚಾಗಿದೆ. ಕಿಡ್ನಿ ಸ್ಟೋನ್‌ ಸಮಸ್ಯೆ ಇರುವವರು ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಬೇಕು. ಹೀಗೆ ಮಾಡುವುದರಿಂದ ಕಿಡ್ನಿ ಕಲ್ಲು ಕರಗಿ ಹೋಗುತ್ತದೆ ಜೊತೆಗೆ ನೋವು ಕೂಡ ಇರುವುದಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...