ಯಾವುದಾದರೂ ಒಂದು ಹಳ್ಳಿಯಲ್ಲಿ ಎಲ್ಲೆಲ್ಲೂ ಬೆದರುಗೊಂಬೆಗಳೇ ಕಾಣಿಸಿದರೆ ಹೇಗಿರುತ್ತದೆ ಎಂಬ ಕುತೂಹಲ ನಿಮಗಿದ್ದರೆ ನೀವು ಜಪಾನ್ ಗೆ ಹೋಗಬೇಕಾಗುತ್ತದೆ. ಏಕೆಂದರೆ ಇಲ್ಲೊಂದು ಹಳ್ಳಿಯಲ್ಲಿ ಮನುಷ್ಯರಿಗಿಂತಲೂ ಬೆದರುಗೊಂಬೆಗಳೇ ಹೆಚ್ಚಾಗಿವೆ.
ಜಪಾನ್‍ನ ನಗೊರೊ ಎಂಬ ಹಳ್ಳಿ ಇಂಥದ್ದೊಂದು ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಈ ಹಳ್ಳಿಯಲ್ಲಿ ಕೆಲಜನರಷ್ಟೇ ಇರುವುದಾದರೂ ಇಲ್ಲಿರುವ ಬೆದರುಗೊಂಬೆಗಳ ಸಂಖ್ಯೆ ನೂರಕ್ಕೂ ಅಧಿಕ. ಹಾಗಾಗಿ ಹೋದಲ್ಲಿ ಬಂದಲ್ಲಿ ಮನುಷ್ಯರಿಗಿಂತ ಬೆದರುಗೊಂಬೆಗಳೇ ಹೆಚ್ಚಾಗಿ ಕಾಣಿಸುತ್ತವೆ.
ಅಂದಹಾಗೆ ಇಲ್ಲಿ ಬೆದರುಗೊಂಬೆ ಮಾಡುವ ಸಂಪ್ರದಾಯ ಆರಂಭವಾಗಿದ್ದು 19 ವರ್ಷಗಳ ಹಿಂದೆ ಎನ್ನುತ್ತಾರೆ ಬೆದರುಗೊಂಬೆಗಳನ್ನು ತಯಾರಿಸುವ ಕಾಯಕ ಮಾಡಿಕೊಂಡಿರುವ ಅಯನೊ. 19 ವರ್ಷಗಳ ಹಿಂದೆ ಬೆಳೆಗಳನ್ನು ತಿನ್ನಲು ಬರುತ್ತಿದ್ದ ಪಕ್ಷಿಗಳನ್ನು ಓಡಿಸಲು ಬೆದರುಗೊಂಬೆ ತಯಾರಿಸಿ ಅದಕ್ಕೆ ತಂದೆಯ ಉಡುಪು ತೊಡಿಸಿ ನಿಲ್ಲಿಸಿದೆ. ಅಂದಿನಿಂದ ಎಲ್ಲರೂ ಅದನ್ನು ಅನುಸರಿಸಿದರು ಎನ್ನುತ್ತಾರೆ ಅಯನೊ.