
ಭಾರತ ಧರ್ಮ, ಭಾಷೆ, ಸಂಸ್ಕೃತಿ ಎಲ್ಲದರಲ್ಲೂ ವೈವಿಧ್ಯತೆ ಹೊಂದಿರುವ ದೇಶ. ಪ್ರತಿ ನಗರ, ಪ್ರತಿ ಹಳ್ಳಿ ಕೂಡ ವಿಭಿನ್ನವಾಗಿದೆ. ಹಲವು ಗ್ರಾಮಗಳು ವಿಭಿನ್ನ ಮಾತ್ರವಲ್ಲ ಹಲವು ವೈಶಿಷ್ಟ್ಯತೆಗಳನ್ನು ಹೊಂದಿವೆ. ಅವು ಯಾವುವು ಅನ್ನೋದನ್ನು ನೋಡೋಣ.

ಉಪ್ಪಳ : ಈ ಗ್ರಾಮ ಪಂಜಾಬ್ ನ ಜಲಂಧರ್ ನಲ್ಲಿದೆ. ಇಲ್ಲಿನ ಪ್ರತಿ ಮನೆಯಲ್ಲೂ ಇರುವ ನೀರಿನ ಟ್ಯಾಂಕ್ ಗಳನ್ನು ನೋಡೋದೇ ಒಂದು ಅಚ್ಚರಿ. ಹಡಗು, ವಿಮಾನ, ಕುದುರೆ ಹೀಗೆ ವಿಭಿನ್ನ ಮಾದರಿಗಳಲ್ಲಿ ನೀರಿನ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಾಗಿದೆ.

ಮಲನ : ಹಿಮಾಚಲ ಪ್ರದೇಶದಲ್ಲಿರೋ ಪುಟ್ಟ ಹಳ್ಳಿ ಇದು. ಇಲ್ಲಿನ ಗ್ರಾಮಸ್ಥರೆಲ್ಲಾ ತಾವು ಅಲೆಕ್ಸಾಂಡರ್ ನ ಪೂರ್ವಜರು ಅಂತಾ ಭಾವಿಸಿದ್ದಾರೆ. ದ್ವಿಪಕ್ಷೀಯ ಸಂಸತ್ತು ಈ ಗ್ರಾಮವನ್ನು ಆಳುತ್ತದೆ. ಅಕ್ಬರ್ ನನ್ನು ಇವರು ದೇವರೆಂದು ಪೂಜಿಸುತ್ತಾರೆ. ಇಲ್ಲಿನ ಯಾವುದೇ ವಸ್ತುಗಳನ್ನು ನೀವು ಸ್ಪರ್ಷಿಸಿದ್ರೆ ದಂಡ ಗ್ಯಾರಂಟಿ.

ಕೊಡಿನ್ಹಿ : ಜಗತ್ತಿನಲ್ಲಿ ಒಂದೇ ರೀತಿ ಕಾಣುವ 7 ಜನರಿರ್ತಾರೆ ಅನ್ನೋ ನಂಬಿಕೆ ಇದೆ. ಅವರಲ್ಲಿ ಇಬ್ಬರು ನಿಮಗೆ ಈ ಗ್ರಾಮದಲ್ಲೇ ಕಾಣಸಿಗ್ತಾರೆ. ಕೇರಳದ ಈ ಗ್ರಾಮದಲ್ಲಿ ಅವಳಿ ಮಕ್ಕಳದ್ದೇ ಕಾರುಬಾರು. 1000ದಲ್ಲಿ 45 ಮಕ್ಕಳು ಅವಳಿಗಳಿದ್ದಾರೆ.

ಹಿವಾರೆ ಬಜಾರ್ : ಪರಿಶ್ರಮಕ್ಕೆ ಪ್ರತ್ಯಕ್ಷ ಸಾಕ್ಷಿ ಈ ಊರು. ಮಹಾರಾಷ್ಟ್ರದ ಬರಪೀಡಿತ ಪ್ರದೇಶ ಅಹಮದ್ ನಗರದಲ್ಲಿದೆ. ಆದ್ರೆ ಈ ಗ್ರಾಮದಲ್ಲಿ ಮಾತ್ರ ಬಡವರೇ ಇಲ್ಲ, 60 ಕ್ಕೂ ಹೆಚ್ಚು ಮಿಲಿಯನೇರ್ ಗಳಿದ್ದಾರೆ. ಇದು ಭಾರತದ ಅತಿ ಶ್ರೀಮಂತ ಗ್ರಾಮ.

ಪುನ್ಸರಿ : ಮಣ್ಣಿನ ಮನೆ, ಕಚ್ಚಾ ರಸ್ತೆ, ಮೊಬೈಲ್ ನೆಟ್ವರ್ಕ್ ಸಮಸ್ಯೆ ಹಳ್ಳಿ ಅಂದ್ಮೇಲೆ ಎಲ್ಲರಲ್ಲೂ ಮೂಡುವುದು ಇದೇ ಕಲ್ಪನೆ. ಆದ್ರೆ ಗುಜರಾತ್ ನ ಈ ಹಳ್ಳಿ ದೊಡ್ಡ ದೊಡ್ಡ ನಗರಗಳಿಗಿಂತ್ಲೂ ಹೆಚ್ಚಾಗಿ ಅಭಿವೃದ್ಧಿ ಹೊಂದಿದೆ. ಶೌಚಾಲಯ, ಶಾಲೆ, ಆರೋಗ್ಯ ಕೇಂದ್ರ, ಸೋಲಾರ್ ಬೀದಿ ದೀಪಗಳು, ಬಸ್ ಸೇವೆ, ಸ್ವಚ್ಛ ಕುಡಿಯುವ ನೀರು, ವೈಫೈ, ಸಿಸಿ ಟಿವಿ, ಗ್ರಾಮಸ್ಥರಿಗೆ ಅಪಘಾತ ವಿಮೆ ಎಲ್ಲಾ ಸೌಲಭ್ಯವೂ ಇಲ್ಲಿದೆ.

ಶೆತ್ಫಲ್ : ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಈ ಹಳ್ಳಿಯ ಪ್ರತಿ ಮನೆಯಲ್ಲೂ ವಿಶೇಷ ಅತಿಥಿ ಇದೆ. ಅದೇನ್ ಗೊತ್ತಾ ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ಹಾವು ಕಾಳಿಂಗ ಸರ್ಪ. ಹಲವು ವರ್ಷಗಳಿಂದ ಪ್ರತಿ ಮನೆಯಲ್ಲೂ ಕೋಬ್ರಾಗಳಿಗೆ ಜಾಗ ಮಾಡಿಕೊಡಲಾಗ್ತಿದೆ. ಇದುವರೆಗೆ ಒಬ್ಬರಿಗೂ ಹಾವು ಕಡಿದ ಬಗ್ಗೆ ವರದಿಯಾಗಿಲ್ಲ.

ಶನಿ ಶಿಂಗ್ನಾಪುರ್ : ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರೋ ಈ ಗ್ರಾಮ 156 ವರ್ಷ ಹಳೆಯದು. ಪೀಳಿಗೆಗಳು ಬದಲಾದ್ರೂ ಇಲ್ಲಿನ ಮನೆಗಳು ಮಾತ್ರ ಬದಲಾಗಿಲ್ಲ. ಈ ಗ್ರಾಮದಲ್ಲಿರೋ ಯಾವ ಮನೆಗೂ ಬಾಗಿಲೇ ಇಲ್ಲ. ಪೊಲೀಸ್ ಠಾಣೆ, ಗೆಸ್ಟ್ ಹೌಸ್, ರೆಸಾರ್ಟ್, ಟೆಲಿಫೋನ್ ಎಕ್ಸ್ ಚೇಂಜ್ ಹೀಗೆ ಯಾವ ಸರ್ಕಾರಿ ಕಟ್ಟಡಗಳಿಗೂ ಬಾಗಿಲು ಅಳವಡಿಸಿಲ್ಲ. ಒಂದು ಕರ್ಟನ್ ಹಾಕ್ತಾರೆ ಅಷ್ಟೆ. ಪಾರದರ್ಶಕತೆ ಕಾಪಾಡಿಕೊಂಡು ಬರುವುದು ಇವರ ಉದ್ದೇಶ.
ಚಪರ್ : ಭಾರತದ ಬಹುತೇಕ ಮಹಿಳಾ ಅಥ್ಲೀಟ್ ಗಳೆಲ್ಲ ಹರಿಯಾಣದವರು. ಆದ್ರೆ ಹರಿಯಾಣದ ಚಪರ್ ಗ್ರಾಮದಲ್ಲಿ ಹೆಣ್ಣುಮಕ್ಕಳಿಗೆ ವಿಶಿಷ್ಟ ಸ್ಥಾನಮಾನವಿದೆ. ಹೆಣ್ಣು ಮಗು ಹುಟ್ಟಿದ್ರೆ ಊರಿಗೆಲ್ಲಾ ಸಿಹಿ ಹಂಚುತ್ತಾರೆ ಇವರು. ಮಹಿಳೆಯರಿಗೆ ಯಾವುದೇ ಕಟ್ಟುಪಾಡುಗಳಿಲ್ಲ.

ಕೊಕ್ಕರೆ ಬೆಳ್ಳೂರು : ಇದು ಕರ್ನಾಟಕದ ಪುಟ್ಟ ಹಳ್ಳಿ. ಬೆಳೆಗಳಿಗೆ ಹಕ್ಕಿಗಳ ಕಾಟ ತಪ್ಪಿಸಲು ಗ್ರಾಮಸ್ಥರು ಬೆದರುಬೊಂಬೆಗಳನ್ನು ಬಳಸ್ತಾರೆ. ಇನ್ನೂ ಒಂದು ವಿಶೇಷ ಅಂದ್ರೆ ಪಕ್ಷಿಗಳಿಗೆ ಆಹಾರ ಉಣಿಸಲು ಇಲ್ಲಿ ವಿಶಿಷ್ಟ ಸ್ಥಳವಿದೆ. ಹಾಗಾಗಿ ಪ್ರತಿವರ್ಷ ವಿಭಿನ್ನ ಬಾನಾಡಿಗಳು ಇಲ್ಲಿಗೆ ಬರುತ್ತವೆ.