ಹುಡುಗರು ಎಂಥ ಹುಡುಗಿಯರನ್ನು ಇಷ್ಟಪಡ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದ್ರೆ ಹುಡುಗಿಯರು ಎಂಥ ಹುಡುಗರನ್ನು ಇಷ್ಟಪಡ್ತಾರೆ ಎಂಬುದು ಹುಡುಗಿಯರಿಗೆ ಮಾತ್ರ ತಿಳಿದಿರುವ ವಿಚಾರ. ಸಾಮಾನ್ಯವಾಗಿ ಹುಡುಗಿಯರಿಗೆ ಯಾವ ಹುಡುಗರನ್ನು ಕಂಡ್ರೆ ಜಾಸ್ತಿ ಪ್ರೀತಿ ಮಾಡ್ತಾರೆ ಎಂಬುದನ್ನು ನಾವು ಹೇಳ್ತೇವೆ.
ಅಧ್ಯಯನವೊಂದು 35 ಕ್ಕೂ ಹೆಚ್ಚು ದೇಶಗಳ ಹುಡುಗಿಯರ ಜೊತೆ ಮಾತುಕತೆ ನಡೆಸಿದೆ. ಹುಡುಗಿಯರ ಮುಂದೆ ಅನೇಕ ಪ್ರಶ್ನೆಗಳನ್ನು ಇಟ್ಟು ಕೊನೆಗೂ ಹುಡುಗಿಯರಿಗೆ ಯಾವ ಹುಡುಗ್ರು ಇಷ್ಟ ಎಂಬುದನ್ನು ಬಯಲು ಮಾಡಿದೆ.
ಪ್ರತಿಭಾವಂತ ಹುಡುಗರನ್ನು ಹುಡುಗಿಯರು ಇಷ್ಟಪಡ್ತಾರೆ. ಸಂಗೀತ ಹಾಗೂ ಡಾನ್ಸ್ ನಲ್ಲಿ ಮುಂದೆ ಇರುವ ಹುಡುಗರನ್ನು ಕಂಡ್ರೆ ಹುಡುಗಿಯರಿಗೆ ಖುಷಿ. ಗಿಟಾರ್ ಬಾರಿಸುವ ಹುಡುಗರಿಗೆ ಒಮ್ಮೆಲೆ ಬಿದ್ದು ಹೋಗ್ತಾರೆ ಹುಡುಗಿಯರು. ಇಷ್ಟೇ ಅಲ್ಲ ಬೋಲ್ಡ್ ಆಗಿ ಮಾತನಾಡುವ ಹುಡುಗರಿಗೆ ಹೆಚ್ಚಿನ ಅಂಕ ನೀಡ್ತಾರೆ. ಸಂಪ್ರದಾಯದ ಹುಡುಗರನ್ನು ಸ್ವಲ್ಪ ದೂರ ಇಡ್ತಾರೆ.
ವೈಯಕ್ತಿಕ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡುವ ಹುಡುಗರ ಹತ್ತಿರ ಬರ್ತಾರೆ ಹುಡುಗಿಯರು. ಅಳುವ ಹಾಗೂ ಕಿರಿಕಿರಿ ಮಾಡುವ ಹುಡುಗರಿಂದ ಬಲು ದೂರ ಓಡಿ ಹೋಗ್ತಾರೆ. ಒಂದೇ ವಿಚಾರಕ್ಕೆ ಅಂಟಿಕೊಂಡಿರುವ ಹುಡುಗರನ್ನು ಇಷ್ಟಪಡುವುದಿಲ್ಲ ಹುಡುಗಿಯರು. ಬುದ್ಧಿವಂತ, ಪ್ರೀತಿ ಮಾಡುವ, ಸಹಜವಾಗಿರುವ, ಹಾಸ್ಯದ ಹುಡುಗರಿಗೆ ಆಕರ್ಷಿತರಾಗ್ತಾರೆ ಹುಡುಗಿಯರು.