ಕೆಲವೊಂದು ಜೀವ ಜಂತುಗಳು ನಮ್ಮ ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ನೀಡುತ್ತವೆ. ಇದಕ್ಕೆ ಹಲ್ಲಿ ಕೂಡ ಹೊರತಾಗಿಲ್ಲ. ಹಲ್ಲಿ ಏನು ಮಾಡಿದ್ರೆ ಶುಭ? ಏನು ಮಾಡಿದ್ರೆ ಅಶುಭ? ಹಲ್ಲಿ ಯಾವ ಸ್ಥಿತಿಯಲ್ಲಿ ಕಾಣಬಾರದು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಮನೆಯೊಳಗೆ ಪ್ರವೇಶ ಮಾಡುವಾಗ ಹಲ್ಲಿ ಕಂಡ್ರೆ ಶುಭ. ಆದ್ರೆ ಗೃಹಪ್ರವೇಶದ ದಿನ ಸತ್ತ ಹಲ್ಲಿ ಕಣ್ಣಿಗೆ ಬೀಳಬಾರದು. ಸತ್ತ ಹಲ್ಲಿ ಕಾಣಿಸಿಕೊಂಡ್ರೆ ಅವಶ್ಯವಾಗಿ ಪೂಜೆ ಮಾಡಿ ನಂತ್ರವೇ ಹೊಸ ಮನೆ ಪ್ರವೇಶ ಮಾಡಬೇಕು. ಸತ್ತ ಹಲ್ಲಿಗಳು ಕಣ್ಣಿಗೆ ಬೀಳುವುದು ಅಶುಭ. ಇದು ಮನುಷ್ಯನ ಏಳಿಗೆಗೆ ಅಡ್ಡಿಯುಂಟು ಮಾಡುತ್ತದೆ. ಸದಾ ರೋಗದಿಂದ ಬಳಲುವಂತೆ ಮಾಡುತ್ತದೆ.
ಹಲ್ಲಿ ಧ್ವನಿ ಬೆಳಿಗ್ಗೆ ಕೇಳಿದ್ರೆ ಅದನ್ನು ಶುಭವೆಂದು ಪರಿಗಣಿಸಲಾಗಿದೆ. ರಾತ್ರಿ ಹಲ್ಲಿ ಕೂಗಿದ ಶಬ್ಧ ಕೇಳಿದ್ರೆ ಅದು ಅಶುಭವೆನ್ನಲಾಗುತ್ತದೆ. ಜೀವನದಲ್ಲಿ ಕೆಟ್ಟ ಘಟನೆ ಅಥವಾ ಕೆಟ್ಟ ಸುದ್ದಿ ಕೇಳಬೇಕಾಗುತ್ತದೆ ಎಂದರ್ಥ.
ಎರಡು ಹಲ್ಲಿಗಳು ಗಲಾಟೆ ಮಾಡಿಕೊಳ್ಳುತ್ತಿರುವುದು ಕಣ್ಣಿಗೆ ಬಿದ್ರೆ ಭವಿಷ್ಯದಲ್ಲಿ ನಿಮ್ಮ ಆಪ್ತ ಸ್ನೇಹಿತರು ಅಥವಾ ಸಂಬಂಧಿಕರು ದೂರವಾಗ್ತಾರೆ ಎಂದರ್ಥ.
ಹಬ್ಬದಲ್ಲಿ ಅಥವಾ ವಿಶೇಷ ದಿನಗಳಲ್ಲಿ ಹಲ್ಲಿ ಕಾಣಿಸಿದ್ರೆ ಅದು ಶುಭ ಸಂಕೇತ. ಹಲ್ಲಿ ಕಂಡ್ರೆ ಕೈಮುಗಿಯಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.