ವಾಕ್ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯ ಬೆಳಗ್ಗೆ-ಸಂಜೆ ನಿಗದಿತ ಟೈಮ್ ನಲ್ಲಿನ 30 ರಿಂದ 40 ನಿಮಿಷ ನಡಿಗೆ 100 ಗ್ರಾಂನಷ್ಟು ಕ್ಯಾಲೋರಿಯನ್ನು ಬರ್ನ್ ಮಾಡುತ್ತದೆ. 20 ನಿಮಿಷಗಳ ಬ್ರಿಸ್ಕ್ ವಾಕ್ ಉತ್ತಮ ಫಲಿತಾಂಶವನ್ನು ನೀಡುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಇದು ಸೂಕ್ತವಾದ ಉಪಾಯ.
ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಟೋನೆಡ್ ಲೆಗ್ಸ್ ಹೊಂದಲು ಸಹಕಾರಿ. ವಾಕ್ ಮಾಡಿ ಬಂದ ತಕ್ಷಣ ಕಾಫಿ-ಟೀ ಸೇವಿಸಬಾರದು. ಮಾತನಾಡುತ್ತಾ ನಡೆಯುವುದು, ಅಲ್ಲಲ್ಲೇ ನಿಂತು ಸ್ಪೀಡ್ ಬ್ರೇಕ್ ಮಾಡುವುದು ಉತ್ತಮ ರಿಸಲ್ಟ್ ನೀಡುವುದಿಲ್ಲ.
ಒಮ್ಮೆ ಪ್ರಾರಂಭಿಸಿದ ನಡಿಗೆಯ ಸಮಯ ಹಾಗೂ ದೂರವನ್ನು 15 ದಿನಗಳಿಗೊಮ್ಮೆ ಸ್ವಲ್ಪ ಬದಲಾಯಿಸಬೇಕು. ಹೆಚ್ಚು ದಿನ ಒಂದೇ ಸಮಯ, ದೂರ ದೇಹಕ್ಕೆ ಒಗ್ಗಿ ಹೋಗುತ್ತದೆ. ದೇಹಕ್ಕೆ ವರ್ಕೌಟ್ ಆಗುವುದಿಲ್ಲ. ಯುವಕ-ಯುವತಿಯರು ನಡಿಗೆ ಅಭ್ಯಾಸದಂತೆ ಸಮಯ ಹಾಗೂ ವೇಗವನ್ನು ಹೆಚ್ಚಿಸಿಕೊಳ್ಳುವುದು ಉತ್ತಮ ರಿಸಲ್ಟ್ ನೀಡುತ್ತದೆ. ಆದರೆ ಮಧ್ಯ ವಯಸ್ಕರು ಹಾಗೂ ವಯಸ್ಸಾದವರು ನಿಗದಿತ ವೇಗ ಹಾಗೂ ಸಮಯವನ್ನು ಪಾಲಿಸುವುದು ಒಳಿತು.