alex Certify ಈ ಸುದ್ದಿ ಕೇಳಿದ್ರೆ ಇಂಥವರೂ ಇರ್ತಾರಾ ಅಂತಾ ಅನಿಸದೆ ಇರದು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸುದ್ದಿ ಕೇಳಿದ್ರೆ ಇಂಥವರೂ ಇರ್ತಾರಾ ಅಂತಾ ಅನಿಸದೆ ಇರದು..!

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ನಡೆಯೋ ಒಂದು ಖುಷಿ ವಿಚಾರ. ಇದನ್ನು ಅನೇಕರು ತಮ್ಮದೇ ರೀತಿಯಲ್ಲಿ ವಿಭಿನ್ನವಾಗಿ ಸಂಭ್ರಮಿಸಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಮದುವೆಗೆ ಆಗಮಿಸುವ ಅತಿಥಿಗಳಿಗೆ ನಿಯಮಗಳನ್ನೂ ತರುತ್ತಾರೆ. ಆದರೆ, ಸಾಯೋಕು ಮುನ್ನ ತಮ್ಮ ಅಂತ್ಯಕ್ರಿಯೆಗೆ ನಿಯಮಗಳನ್ನು ಮಾಡಿರೋದನ್ನು ಎಲ್ಲಾದ್ರೂ ಕೇಳಿದ್ದೀರಾ..?

ಹೌದು, ಆಶ್ಚರ್ಯ ಆದ್ರೂ ಇದು ನಿಜ. ಮಹಿಳೆಯೊಬ್ಬರು ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ಈಗಾಗಲೇ ಒಂಭತ್ತು ನಿಯಮಗಳನ್ನು ಹೊರತಂದಿದ್ದಾಳೆ. ಇದರ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು, ಭಾರಿ ಕೋಲಾಹಲವನ್ನೇ ಸೃಷ್ಟಿಸಿದ್ದಾಳೆ.

ತನ್ನ ಅಂತ್ಯಕ್ರಿಯೆಗೆ ಆಗಮಿಸುವ ಅತಿಥಿಗಳಿಗೆ ತಂದಿರುವ ಒಂಭತ್ತು ನಿಯಮಗಳು ಯಾವ್ಯಾವುದು ಅನ್ನೋದನ್ನು ನೋಡಿಕೊಂಡ ಬರೋಣ.

ಮೊದಲನೆಯದಾಗಿ ಈಕೆಯೊಂದಿಗೆ ತೆಗೆದಿರುವ ಫೋಟೋವನ್ನು ಅಂತ್ಯಕ್ರಿಯೆಗೆ ತರಬೇಕು. ಅದು ಹಳೆಯ ಚಿತ್ರವಾಗಿರಬಹುದು ಅಥವಾ ಇತ್ತೀಚಿನ ಚಿತ್ರವಾಗಿರಬಹುದು. ಆದರೆ, ಫೋಟೋ ಹೊಂದಿರದವರು ತನ್ನ ಅಂತ್ಯಕ್ರಿಯೆಗೆ ಬರಬಾರದು. ತನ್ನ ಜೀವನ ಅಥವಾ ಸಾವಿನಲ್ಲಿ ನಕಲಿಗಳೊಂದಿಗೆ ತಾನು ವ್ಯವಹರಿಸುವುದಿಲ್ಲ ಎಂದು ತಿಳಿಸಿದ್ದಾಳೆ.

ಅಂತ್ಯಕ್ರಿಯೆಗೆ ಬರುವವರು ಲೈಟ್ ಗ್ಲಾಮ್ ಲುಕ್ ಧರಿಸಿರಬೇಕು. ಏಕೆಂದರೆ ಪೆಟ್ಟಿಗೆಯಲ್ಲಿ ಮಲಗಿರುವಾಗಲೂ ಆಕೆ ಕ್ಯಾಸ್ಕೆಟ್ ರೆಡಿ ಆಗಿರಲು ಬಯಸುವುದಿಲ್ಲ ಎಂದು ಹೇಳಿದ್ದಾಳೆ. ಅತಿಥಿಗಳ ದುಃಖದ ಉಸಿರು, ಸಾವಿನಲ್ಲಿ ತನ್ನನ್ನು ಗೌರವಿಸುತ್ತೀರಿ ಎಂದು ನಂಬುವುದಾಗಿ ವಿವರಿಸಿದ್ದಾಳೆ.

ಮಹಿಳೆಯ ಅಂತ್ಯಕ್ರಿಯೆಯ ಭಾಷಣಗಳನ್ನು ಮಾಡುವಾಗ ಐದು ನಿಮಿಷಗಳಿಗಿಂತ ಕಡಿಮೆಯಿರಬೇಕೆಂದು ಕಡ್ಡಾಯಗೊಳಿಸಿದ್ದಾಳೆ. ಅಲ್ಲದೆ, ಅತಿಥಿಗಳು ಕಪ್ಪು ಬಣ್ಣದ ಉಡುಪು ಧರಿಸುವ ನಿಯಮವನ್ನು ಅನುಸರಿಸಲು ಈಕೆ ಬಯಸುವುದಿಲ್ಲ. ಅತಿಥಿಗಳು ಬೇರೆ ಬಣ್ಣದ ಉಡುಪನ್ನು ಧರಿಸಬೇಕು ಮತ್ತು ಮನಸ್ಥಿತಿಯನ್ನು ಹಗುರಗೊಳಿಸಬೇಕು ಎಂದು ಹೇಳಿದ್ದಾಳೆ.

ಅಷ್ಟೇ ಅಲ್ಲ, ಮಹಿಳೆಯು ಈಗಾಗಲೇ ಆಹಾರದ ಮೆನುವನ್ನು ಸಹ ಸಿದ್ಧಪಡಿಸಿದ್ದಾಳೆ. ಸಹಜವಾಗಿ, ಆಕೆ ತನ್ನ ಪೆಟ್ಟಿಗೆಯಲ್ಲಿ ಒಂದು ತಟ್ಟೆಯನ್ನು ಇಡಲು ಬಯಸುತ್ತಾಳೆ.

ಇನ್ನು ಬಾರ್ ಕೌಂಟರ್‌ನಿಂದ ಕನಿಷ್ಠ ಎರಡು ಪಾನೀಯಗಳನ್ನಾದ್ರೂ ಇಡುವಂತೆ ಕೇಳಿಕೊಂಡಿದ್ದಾಳೆ. ಹಾಗೆಯೇ ಈಕೆಯ ಅಂತ್ಯಕ್ರಿಯೆಯ ಕೊನೆಯ ನಿಯಮದ ಪ್ರಕಾರ, ಅಂತ್ಯಕ್ರಿಯೆಗೆ ಬಂದಿರುವವರು ಗರಿಷ್ಠ 20 ನಿಮಿಷಗಳಷ್ಟು ಮಾತ್ರ ಅಳುವಂತೆ ಸಮಯ ನಿಗದಿಪಡಿಸಲಾಗಿದೆ.

ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ವೈರಲ್ ಆಗಿದೆ. ನಾಲ್ಕು ಮಿಲಿಯನ್ ಗೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದು, ಸಖತ್ ಸದ್ದು ಮಾಡುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...