ಇದು ಮಾವಿನ ಹಣ್ಣಿನ ಸೀಸನ್. ವೈವಿಧ್ಯಮಯ ರುಚಿಯ ಮಾವಿನ ಹಣ್ಣುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದನ್ನು ಸೇವಿಸಿದ ಬಳಿಕ ಈ ಕೆಲವು ವಸ್ತುಗಳನ್ನು ಸೇವಿಸಬಾರದು ಎಂಬುದು ನಿಮಗೆ ತಿಳಿದಿದೆಯೇ.
ಶಾರೀರಿಕ ಸಂಬಂಧದಿಂದ ದೂರ ಇರ್ತಾಳೆ ಗರ್ಭಿಣಿ ಯಾಕೆ ಗೊತ್ತಾ……?
ಮಾವಿನ ಹಣ್ಣು ತಿಂದ ಕೂಡಲೇ ನೀರು ಕುಡಿಯಬಾರದು. ಇದರಿಂದ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಮಾವಿನ ಹಣ್ಣು ತಿಂದ ಅರ್ಧ ಅಥವಾ ಒಂದು ಗಂಟೆ ತನಕ ನೀರು ಕುಡಿಯದಿರಿ.
ಮಾವು ತಿಂದ ಬಳಿಕ ಐಸ್ ಕ್ರೀಮ್ ಅಥವಾ ಜ್ಯೂಸ್ ಕುಡಿಯುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಮಾವಿನಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಸಕ್ಕರೆ ಇರುತ್ತದೆ. ಐಸ್ ಕ್ರೀಮ್ ನಲ್ಲಿ ಸಿಹಿಯ ಪ್ರಮಾಣ ಧಾರಾಳವಾಗಿ ಇರುತ್ತದೆ. ಮಧುಮೇಹ ಸಮಸ್ಯೆ ಇರುವವರು ಇಷ್ಟೊಂದು ಪ್ರಮಾಣದ ಸಕ್ಕರೆ ಒಟ್ಟಿಗೆ ಸೇವಿಸಿದರೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮನೆಯಲ್ಲಿ ಮಾಡಿ ರುಚಿ ರುಚಿ ಕಲ್ಲಂಗಡಿ ಸ್ಮೂಥಿ
ಇನ್ನು ಮಾವು ತಿಂದ ಬಳಿಕ ಮೊಸರು ಸೇವಿಸುವುದು ಕೂಡ ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತದೆ. ಮಾವಿನ ಹಣ್ಣು ತಿಂದ ಬಳಿಕ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವುದು ಕೂಡ ಒಳ್ಳೆಯದಲ್ಲ.