alex Certify ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿದ್ರೆ ಉದ್ದ ಕೂದಲು ಬೆಳೆಸೋದು ಬಹಳ ಸುಲಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿದ್ರೆ ಉದ್ದ ಕೂದಲು ಬೆಳೆಸೋದು ಬಹಳ ಸುಲಭ

ಸುಂದರವಾದ ಉದ್ದ ಕೂದಲು ಬೇಕು ಅನ್ನೋ ಆಸೆ ಇರೋದು ಸಹಜ. ಆದ್ರೆ ಕೂದಲು ಉದುರುವ ಸಮಸ್ಯೆ ಬಹುತೇಕ ಎಲ್ಲರಿಗೂ ಇದೆ. ಕೂದಲು ಬಲವಾಗಿ ಬೆಳೆಯುವುದಿಲ್ಲ ಅನ್ನೋದು ಎಲ್ಲರ ದೂರು. ಕೆಲವೊಂದು ಚಿಕ್ಕಪುಟ್ಟ ವವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ನೀವು ಕೂಡ ದಟ್ಟವಾದ ಉದ್ದ ಕೂದಲನ್ನು ಹೊಂದಬಹುದು.

ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ನೆತ್ತಿಯನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ. ಕೂದಲಿಗೆ ಶಾಂಪೂ ಹಾಕುವಾಗ ನಿಧಾನವಾಗಿ ಸ್ಕಾಲ್ಪ್‌ಗೆ ಮಸಾಜ್‌ ಮಾಡಿ. ಇದು ಕೂದಲನ್ನು ಬಲಪಡಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸರಿಯಾದ ಆಹಾರ ತೆಗೆದುಕೊಳ್ಳದೇ ಇದ್ರೆ ಕೂದಲಿನ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗಾಗಿ ಆಹಾರದ ಬಗ್ಗೆಯೂ ನೀವು ವಿಶೇಷ ಗಮನ ಹರಿಸಬೇಕಾಗುತ್ತದೆ.

ಇಲ್ಲದಿದ್ದರೆ ಸ್ಪ್ಲಿಟ್‌ ಹೇರ್‌ ಸಮಸ್ಯೆ ಆಗುತ್ತದೆ. ನಿಮ್ಮ ಆಹಾರದಲ್ಲಿ ಕಾಲಜನ್ ಮತ್ತು ಬುಟೊಟಿನ್‌ನಂತಹ ಪೋಷಕಾಂಶಗಳನ್ನು ಸೇರಿಸಿಕೊಳ್ಳಬೇಕು. ಕೂದಲು ಚೆನ್ನಾಗಿ ಬೆಳೆಯಬೇಕೆಂದರೆ ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಹೇರ್ ವಾಶ್ ಮಾಡುವ ಮೊದಲು ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಬೇಕು. ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಹಚ್ಚಬಹುದು.

ಇದಲ್ಲದೆ ಮೂರು ತಿಂಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡುವುದು ಸಹ ಅಗತ್ಯವಾಗಿದೆ. ಒದ್ದೆಯಾದ ಕೂದಲನ್ನು ಬಾಚಿಕೊಳ್ಳಬೇಡಿ. ಇದು ನಿಮಗೆ ಸಮಸ್ಯೆ ಉಂಟುಮಾಡಬಹುದು. ವಾಸ್ತವವಾಗಿ ಒದ್ದೆ ಕೂದಲು ಬಾಚುವುದರಿಂದ ನಿಮ್ಮ ಕೂದಲು ಒಡೆಯಲು ಪ್ರಾರಂಭಿಸುತ್ತದೆ. ಈ ಸಣ್ಣ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ತಂತಾನೇ ಕೂದಲು ಚೆನ್ನಾಗಿ ಬೆಳೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...