ಜೀವನದಲ್ಲಿ ಕೆಲವೊಮ್ಮೆ ಏಕಾಏಕಿ ತೊಂದರೆ ಎದುರಾಗುತ್ತದೆ. ಇದ್ದಕ್ಕಿದ್ದಂತೆ ಕಷ್ಟಗಳು ಎದುರಾಗುತ್ತವೆ. ಇದಕ್ಕೆ ಕಾರಣ ಕೆಟ್ಟ ದೃಷ್ಟಿ. ಸಂಪತ್ತು, ಆಸ್ತಿಯೊಂದೆ ಅಲ್ಲ ದಾಂಪತ್ಯ, ಪ್ರೀತಿ, ಕುಟುಂಬದ ಮೇಲೂ ಕೆಟ್ಟ ದೃಷ್ಟಿ ಬೀಳುತ್ತದೆ. ಕೆಟ್ಟ ಕಣ್ಣು ಮಕ್ಕಳ ಮೇಲೆ ಬಿದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮನೆಯ ಯಾವುದೇ ಸದಸ್ಯನ ಆಹಾರ ಸೇವನೆ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ ಆ ವ್ಯಕ್ತಿಗೆ ಆಹಾರ ನೀಡಿದ ಬಟ್ಟಲಿನಿಂದ ಎಲ್ಲ ಪದಾರ್ಥದ ಸ್ವಲ್ಪ ಸ್ವಲ್ಪವನ್ನು ತೆಗೆದು ಎಲೆ ಮೇಲಿಟ್ಟು, ನಾಲ್ಕು ರಸ್ತೆ ಕೂಡುವ ಜಾಗದಲ್ಲಿಡಿ. ನೆನಪಿಡಿ ಅದನ್ನು ತಿರುಗಿ ನೋಡಬೇಡಿ.
ಮನೆಯ ಮುಖ್ಯಸ್ಥನಿಗೆ ದೃಷ್ಟಿ ತಗುಲಿದ್ರೆ ಕಬ್ಬಿಣದ ತುಂಡನ್ನು ತೆಗೆದುಕೊಂಡು ಏಳು ಬಾರಿ ತಲೆಯಿಂದ ಕಾಲಿನವರೆಗೆ ಅದನ್ನು ತೋರಿಸಿ. ಪ್ರತಿ ಬಾರಿ ಕಾಲಿನವರೆಗೆ ತಂದ ನಂತ್ರ ಚೀಲಕ್ಕೆ ಕಬ್ಬಿಣವನ್ನು ಸ್ಪರ್ಶಿಸಿ ಮತ್ತೆ ತಲೆಯಿಂದ ಕಬ್ಬಿಣವನ್ನು ಕೆಳಗೆ ತನ್ನಿ.
ಬೆಳ್ಳುಳ್ಳಿ ಸಿಪ್ಪೆ, ಕೂದಲು, ಸಾಸಿವೆ, ಉಪ್ಪನ್ನು ಕೈನಲ್ಲಿ ಹಿಡಿದು ಅದನ್ನು ಮೂರು ಬಾರಿ ಪ್ರದಕ್ಷಣೆ ಮಾಡಿ ಅದನ್ನು ಬೆಂಕಿಗೆ ಹಾಕಿ.
ಮನೆಗೆ ಹೋಗ್ತಿದ್ದಂತೆ ನಿರಾಶೆ, ಕೋಪ ಬರುತ್ತದೆ. ಮನೆ ಪ್ರವೇಶ ಮಾಡ್ತಿದ್ದಂತೆ ಒತ್ತಡ ಕಾಡುತ್ತದೆ. ಇಂಥ ಸಂದರ್ಭದಲ್ಲಿ ತೆಂಗಿನ ಕಾಯಿಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮನೆ ಮುಖ್ಯ ದ್ವಾರದಲ್ಲಿ ಕಟ್ಟಿ.