ದಾಂಪತ್ಯ ಜೀವನದಲ್ಲಿ ಪ್ರೀತಿ ಹಾಗೂ ವಿಶ್ವಾಸ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಸುಖಕರ ದಾಂಪತ್ಯಕ್ಕೆ ಶಾರೀರಿಕ ಸಂಬಂಧ ಅವಶ್ಯ. ಆದ್ರೆ ಕೆಲವೊಂದು ಪರಿಸ್ಥಿತಿಯಲ್ಲಿ ಸೆಕ್ಸ್ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಸೋಂಕು ಹರಡುವ ಕ್ಷಯ, ದಡಾರ ಕಾಣಿಸಿಕೊಂಡಾಗ ಸಂಬಂಧ ಬೆಳೆಸಬೇಡಿ. ಹಾಗೆ ಮಾಡಿದಲ್ಲಿ ಸಂಗಾತಿಗೆ ಕೂಡ ಈ ರೋಗ ಹರಡುತ್ತದೆ.
ಶಸ್ತ್ರಚಿಕಿತ್ಸೆಯಾದ ಕೆಲ ದಿನ ಶಾರೀರಿಕ ಸಂಬಂಧ ಬೇಡ. ಈ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
ಗರ್ಭಿಣಿಯಾದಾಗ ಏನು ಮಾಡಬೇಕೆಂಬ ಗೊಂದಲ ಅನೇಕರನ್ನು ಕಾಡುತ್ತದೆ. ಸಾಮಾನ್ಯವಾಗಿ ಮೊದಲ ಮೂರು ತಿಂಗಳು ದೂರವಿರುವುದು ಒಳ್ಳೆಯದು.
ನಿಮಗೆ ಅಥವಾ ನಿಮ್ಮ ಸಂಗಾತಿಗೆ ಹಾರ್ಟ್ ಸಮಸ್ಯೆ ಇದ್ದರೆ ಸಂಬಂಧ ಬೆಳೆಸಬೇಡಿ. ಸೆಕ್ಸ್ ವೇಳೆ ಹೃದಯ ಬಡಿತ ಹೆಚ್ಚಾಗಿ ಸಮಸ್ಯೆ ಜಾಸ್ತಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಶಾರೀರಿಕ ಸಂಬಂಧ ಬೆಳೆಸುವ ವೇಳೆ ಮಾನಸಿಕ ಆರೋಗ್ಯ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಮಾನಸಿಕ ಸ್ಥಿತಿ ಸರಿಯಿಲ್ಲದ ಸಮಯದಲ್ಲಿ ಸಂಬಂಧ ಬೇಡ.