ಕ್ಯಾಬೇಜ್ ಅನ್ನು ಸ್ಯಾಂಡ್ ವಿಚ್ ನಿಂದ ಹಿಡಿದು ಪಲ್ಯ, ಸಾಂಬರ್ ತನಕ ಹಲವು ರೂಪದಲ್ಲಿ ಬಳಸುತ್ತಾರೆ. ಇದು ವರ್ಷದ ಎಲ್ಲಾ ಋತುಗಳಲ್ಲಿ ಸಿಗುವ ತರಕಾರಿಯಾಗಿದೆ. ಇದರ ಸೇವನೆಯಿಂದ ವಿಟಮಿನ್ ಗಳು, ನಾರಿನಂಶಗಳು, ಫೈಬರ್, ಸೋಡಿಯಂ ಮೊದಲಾದ ಉತ್ತಮ ಅಂಶಗಳು ನಮ್ಮ ದೇಹಕ್ಕೆ ಸಿಗುತ್ತವೆ.
ಇದನ್ನು ನಿತ್ಯ ಸೇವಿಸುವುದರಿಂದ ಕಣ್ಣಿನ ಪೊರೆ ಬರುವುದನ್ನು ತಡೆಯಬಹುದು. ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ನಿತ್ಯ ಸೇವಿಸುವುದು ಒಳ್ಳೆಯದು. ಇದರಲ್ಲಿರುವ ನಾರಿನಂಶ ಆಹಾರವನ್ನು ಬೇಗ ಜೀರ್ಣ ಮಾಡುತ್ತದೆ. ಮೂಳೆಗಳು ಗಟ್ಟಿಯಾಗಲೂ ಇದು ಸಹಕಾರಿ.
ನರಗಳ ಸಮಸ್ಯೆ ದೂರ ಮಾಡಿ ದೇಹದಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚಿಸುತ್ತದೆ. ಕೂದಲು ದಟ್ಟವಾಗಿ ಬೆಳೆಯಲೂ ಇದು ಸಹಕಾರ ನೀಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ತ್ವಚೆಯ ವಯಸ್ಸಾದ ಗುಣವನ್ನು ಕಡಿಮೆ ಮಾಡುತ್ತದೆ.
ಆದರೆ ಬಳಸುವ ಮುನ್ನ ಇದನ್ನು ಕಡ್ಡಾಯವಾಗಿ ತೊಳೆಯಬೇಕು. ಇದನ್ನು ಸಣ್ಣದಾಗಿ ಹೆಚ್ಚಿಕೊಂಡ ಬಳಿಕವೂ ಉಪ್ಪು ನೀರು ಅಥವಾ ಬಿಸಿ ನೀರಿನಲ್ಲಿ ಮುಳುಗಿಸಿ ತೊಳೆದು ಬಳಸಿ.