alex Certify ಈ ಸಮಸ್ಯೆಗಳಿದ್ದರೆ ಅರಿಶಿನ ತಿನ್ನಬೇಡಿ, ಆರೋಗ್ಯ ಮತ್ತಷ್ಟು ಬಿಗಡಾಯಿಸಬಹುದು ಎಚ್ಚರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಸ್ಯೆಗಳಿದ್ದರೆ ಅರಿಶಿನ ತಿನ್ನಬೇಡಿ, ಆರೋಗ್ಯ ಮತ್ತಷ್ಟು ಬಿಗಡಾಯಿಸಬಹುದು ಎಚ್ಚರ…!

ಅರಿಶಿನವನ್ನು ನಾವು ಪ್ರತಿದಿನ ಅಡುಗೆಗೆ ಬಳಸುತ್ತೇವೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಅನೇಕ ತಿನಿಸುಗಳು ಅರಿಶಿನವಿಲ್ಲದೇ ಅಪೂರ್ಣವೆನಿಸುತ್ತವೆ. ಅರಿಶಿನದಲ್ಲಿರುವ ಔಷಧೀಯ ಗುಣಗಳಿಂದಾಗಿ, ಅನೇಕ ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ. ಆದರೆ ಈ ಮಸಾಲೆ ಪದಾರ್ಥ ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲವು ನಿರ್ದಿಷ್ಟ ಸಮಸ್ಯೆಗಳಿರುವವರು ಅರಿಶಿನದಿಂದ ದೂರವಿರುವುದು ಉತ್ತಮ. ಇಲ್ಲದಿದ್ದರೆ ಅವರ ಆರೋಗ್ಯ ಹದಗೆಡಬಹುದು.

ಮಧುಮೇಹ ರೋಗಿಗಳು

ಮಧುಮೇಹದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ತಮ್ಮ ರಕ್ತವನ್ನು ತೆಳುವಾಗಿಡಲು ಅನೇಕ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಜೊತೆಗೆ ಅವರು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬೇಕಾಗುತ್ತದೆ. ಮಧುಮೇಹ ರೋಗಿಗಳು ಅರಿಶಿನವನ್ನು ಅತಿಯಾಗಿ ಸೇವಿಸಿದರೆ, ಅವರ ದೇಹದಲ್ಲಿನ ರಕ್ತದ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗುತ್ತದೆ, ಇದು ದೇಹಕ್ಕೆ ಒಳ್ಳೆಯದಲ್ಲ.

ಕಾಮಾಲೆ ರೋಗಿಗಳು

ಜಾಂಡೀಸ್ ಅಂದರೆ ಕಾಮಾಲೆ ಇರುವವರು ಅರಿಶಿನವನ್ನು ಆದಷ್ಟು ದೂರವಿಡಬೇಕು. ಅರಿಶಿನವನ್ನು ತಿನ್ನಲು ಬಯಸಿದರೆ, ಅದಕ್ಕಾಗಿ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು ಮತ್ತು ಸೀರಮ್ ಬೈಲಿರುಬಿನ್ ಮಟ್ಟವು ಹೆಚ್ಚಾಗಬಹುದು.

ಸ್ಟೋನ್‌ ಸಮಸ್ಯೆ

ಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿರುವವರು ತುಂಬಾ ನೋವನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ಅರಿಶಿನ ಸೇವನೆಯನ್ನು ಕಡಿಮೆ ಮಾಡಿ, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು.

ರಕ್ತಸ್ರಾವ

ಮೂಗಿನಿಂದ ಅಥವಾ ದೇಹದ ಯಾವುದೇ ಭಾಗದಿಂದ ರಕ್ತಸ್ರಾವವಿರುವವರು ಅರಿಶಿನ ಸೇವನೆಯನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ರಕ್ತಸ್ರಾವವು ಹೆಚ್ಚಾಗಬಹುದು. ದೇಹದಲ್ಲಿ ರಕ್ತಹೀನತೆ ಉಂಟಾಗಬಹುದು, ಅದು ನಂತರ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...