ನಾವು ಜೋಕ್ ಮಾಡ್ತಾ ಇಲ್ಲ. ಬೂಟ್ ಅಥವಾ ಚಪ್ಪಲಿ ಖರೀದಿಸಲು ಬೆಳಿಗ್ಗೆಗಿಂತ ಸಂಜೆ ಒಳ್ಳೆಯ ಸಮಯ. ಜ್ಯೋತಿಷ್ಯದ ಪ್ರಕಾರ ನಾವು ಈ ಸಮಯ ಬೆಸ್ಟ್ ಎಂದು ಹೇಳ್ತಾ ಇಲ್ಲ. ವಿಜ್ಞಾನಿಗಳ ಪ್ರಕಾರ ಸಂಜೆ ಅಂದ್ರೆ ಸೂರ್ಯ ಮುಳುಗುತ್ತಿರುವ ಹೊತ್ತು ಒಳ್ಳೆಯದು ಎನ್ನುತ್ತಿದ್ದೇವೆ. ಇದಕ್ಕೆ ಬಲವಾದ ಕಾರಣವೂ ಇದೆ.
ವಿಜ್ಞಾನಿಗಳ ಪ್ರಕಾರ ಹೊಸ ಪಾದರಕ್ಷೆ ಕೊಂಡುಕೊಳ್ಳಲು ಸಂಜೆ ಒಳ್ಳೆಯ ಸಮಯ. ಮಧುಮೇಹದ ಇತಿಹಾಸ ಹೊಂದಿದವರು ಅಥವಾ ಮಧುಮೇಹಿಗಳು ಅವಶ್ಯವಾಗಿ ಸಂಜೆ ಚಪ್ಪಲಿ ಖರೀದಿಸಬೇಕು. ದಿನವಿಡಿ ನಮ್ಮ ದೇಹಕ್ಕೆ ಸಕ್ಕರೆ ಹಾಗೂ ಉಪ್ಪಿನ ಪ್ರಮಾಣ ಸಾಕಷ್ಟು ಸೇರುತ್ತದೆ. ನಮ್ಮ ದೇಹದಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗುತ್ತದೆ. ವಿಶೇಷವಾಗಿ ಇವು ಕೈ ಹಾಗೂ ಪಾದಗಳಲ್ಲಿ ಸಂಗ್ರಹವಾಗುತ್ತದೆ. ಆಗ ನಮ್ಮ ಪಾದದ ಗಾತ್ರ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬಾರ್‌ನಲ್ಲಿ ಮಹಿಳೆಯನ್ನು ರಕ್ಷಿಸಲು ಬಾರ್ಟೆಂಡರ್ ಸುಲಭ ‘ಉಪಾಯ’ ನೆಟ್ಟಿಗರಿಂದ ಶ್ಲಾಘನೆ
ಸಾಮಾನ್ಯವಾಗಿ ಬೆಳಿಗ್ಗೆ ಚಪ್ಪಲಿ ಖರೀದಿಸಿದವರಿಗೆ ರಾತ್ರಿ ಚಪ್ಪಲಿ ಚಿಕ್ಕದು ಎನ್ನಿಸಲು ಶುರುವಾಗುತ್ತದೆ. ಬೆಳಿಗ್ಗೆ ಇದ್ದ ಪಾದದ ಗಾತ್ರ ರಾತ್ರಿ ಹೆಚ್ಚಾಗುವುದರಿಂದ ಪಾದರಕ್ಷೆ ಚಿಕ್ಕದಾಗಿ ಕಿರಿಕಿರಿಯಾಗುತ್ತದೆ. ಹಾಗಾಗಿ ಸಂಜೆ ಪಾದರಕ್ಷೆ ಖರೀದಿಸಿದ್ರೆ ಒಳ್ಳೆಯದು ಎನ್ನುತ್ತದೆ ವಿಜ್ಞಾನ.