ಕೆಲವರು ಮಕ್ಕಳಿಗೆ ಹೊಡೆಯುವುದು, ಕೆಟ್ಟ ಶಬ್ಧದಲ್ಲಿ ಬೈಯುವುದು ಮಾಡುತ್ತಿರುತ್ತಾರೆ. ಮಕ್ಕಳು ತಪ್ಪು ಎಸಗಿದಾಗ ತಿಳಿ ಹೇಳುವುದು ಸರಿ. ಆದರೆ ಯಾವುದೇ ಕಾರಣಕ್ಕೂ ಮುಸ್ಸಂಜೆ ವೇಳೆಯಲ್ಲಿ ಮಕ್ಕಳಿಗೆ ಕೆಟ್ಟ ಶಬ್ಧದಲ್ಲಿ ಬೈಯಬೇಡಿ. ತಂದೆ-ತಾಯಂದಿರು ಆಡಿದ ಕೆಟ್ಟ ಬೈಗುಳವೇ ಮಕ್ಕಳಿಗೆ ಶಾಪವಾಗುವ ಸಾಧ್ಯತೆ ಇರುತ್ತದೆಯಂತೆ.
ಮೊದಲೆಲ್ಲಾ ಮನೆಯಲ್ಲಿನ ಹಿರಿಯರು ಮುಸ್ಸಂಜೆ ಸಮಯದಲ್ಲಿ ಕೆಟ್ಟ ಶಬ್ಧ ಮಾತನಾಡಬೇಡಿ ಎಂದು ಹೇಳುತ್ತಿದ್ದರು. ಮುಸ್ಸಂಜೆ ಸಮಯದಲ್ಲಿ ತಥಾಸ್ತು ದೇವತೆಗಳು ಓಡಾಡುತ್ತಿರುತ್ತಾರಂತೆ. ಮಕ್ಕಳು ಹಟ ಹಿಡಿದಾಗ ತಂದೆ-ತಾಯಂದಿರು ಕೆಟ್ಟದ್ದಾಗಿ ಬೈಯ್ದರೆ ಇದು ಅವರ ಪಾಲಿಗೆ ಶಾಪವಾಗಿ ಮುಂದೆ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತದೆಯಂತೆ. ಅವರ ಓದು, ಕೆಲಸ, ಆರೋಗ್ಯದ ಮೇಲೂ ಪ್ರಭಾವ ಬೀರಿ ಅವರ ಜೀವನವೇ ಹಾಳಾಗುವ ಸಾಧ್ಯತೆ ಇದೆಯಂತೆ.
ಮುಸ್ಸಂಜೆ ಹೊತ್ತಿನಲ್ಲಿ ದೀಪ ಹಚ್ಚಿ ದೇವರನಾಮಗಳನ್ನು ಕೇಳಿ. ಇದರಿಂದ ಮನಸ್ಸು ಶಾಂತವಾಗುತ್ತದೆ. ಜತೆಗೆ ದೇವರ ಅನುಗ್ರಹ ಕೂಡ ನಿಮಗೆ ಸಿಗುತ್ತದೆ.