ಹವಾಮಾನ ಬದಲಾವಣೆಯಿಂದ ಸಣ್ಣ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ರೋಗಕ್ಕೆ ಮಾತ್ರೆ ನುಂಗುವುದು ಒಳ್ಳೆಯದಲ್ಲ. ಮನೆ ಮದ್ದು ಆರೋಗ್ಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುವ ಜೊತೆಗೆ ಮಾತ್ರೆಯಂತೆ ಅಡ್ಡ ಪರಿಣಾಮ ಬೀರುವುದಿಲ್ಲ. ಕೆಲವೊಂದು ಆಹಾರ ಪದ್ಧತಿ ನಮ್ಮ ದೇಹ ಆರೋಗ್ಯವಾಗಿಡುವಂತೆ ಮಾಡುತ್ತದೆ.
ವಾಲ್ನಟ್ಸ್ : ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 3-4 ವಾಲ್ನಟ್ಸ್ ಸೇವನೆ ಮಾಡುತ್ತ ಬಂದಲ್ಲಿ ಮೊಣಕಾಲು ನೋವು ಗುಣವಾಗುತ್ತದೆ.
ಕೊತ್ತಂಬರಿ ಬೀಜ : ಸೀನು ಬರ್ತಾ ಇದ್ದರೆ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ. ನಂತ್ರ ಅದರ ವಾಸನೆಯನ್ನು ತೆಗೆದುಕೊಳ್ಳಿ.
ಈರುಳ್ಳಿ ರಸ : ವಾಂತಿ ಕಾಣಿಸಿಕೊಂಡಾಗ ಈರುಳ್ಳಿ ರಸಕ್ಕೆ ಸ್ವಲ್ಪ ಲಿಂಬು ರಸ ಬೆರೆಸಿ ಕುಡಿಯುವುದರಿಂದ ನೆಮ್ಮದಿ ಸಿಗುತ್ತದೆ.
ಬೆಳ್ಳುಳ್ಳಿ : ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯಾದ್ರೆ ಬೆಳ್ಳುಳ್ಳಿಯ ಮೂರ್ನಾಲ್ಕು ಎಸಳುಗಳನ್ನ ಒಂದು ಚಮಚ ತುಪ್ಪದಲ್ಲಿ ಬೆರೆಸಿ ಅಗೆದು ತಿನ್ನಬೇಕು.
ಮಸಾಲೆ ಆಹಾರ : ಮೂಗು ಕಟ್ಟಿದಂತಾದಾಗ ಮಸಾಲೆ ಆಹಾರ ಸೇವಿಸಿ.
ಕರ್ಜೂರ : ಚಳಿಗಾಲದಲ್ಲಿ ಕಫ ಜಾಸ್ತಿಯಾಗಿದ್ದರೆ ಬಿಸಿ ನೀರಿನ ಜೊತೆ ಕರ್ಜೂರವನ್ನು ಸೇವಿಸಿ. ನೆಮ್ಮದಿ ಸಿಗುತ್ತದೆ.