ಅನಾದಿ ಕಾಲದಿಂದಲೂ ಭಗವಂತ ಶಿವ ತನ್ನ ಭಕ್ತರ ದುಃಖಗಳನ್ನು ಕಡಿಮೆ ಮಾಡುತ್ತ ಬಂದಿದ್ದಾನೆ. ಶಿವನ ಆರಾಧನೆಯಿಂದ ಕೇವಲ ನೋವು-ದುಃಖ ಕಡಿಮೆಯಾಗುವುದೊಂದೇ ಅಲ್ಲ ಮುಂದಿನ ಭವಿಷ್ಯ ಸುಖಕರವಾಗಿರುತ್ತದೆ. ಬೇಡಿ ಬಂದವರಿಗೆ ಇಲ್ಲ ಎನ್ನುವುದಿಲ್ಲ ಶಿವ. ಕೇಳಿದ್ದೆಲ್ಲ ನೀಡುವ ಶಂಕರನಿಗೆ ಭೋಲೇನಾಥ ಎಂದು ಕರೆಯಲಾಗುತ್ತದೆ.
ಶಿವನ ಅಸ್ತ್ರ ತ್ರಿಶೂಲ. ಈ ತ್ರಿಶೂಲಕ್ಕೂ ನಮ್ಮ ಅಂಗೈ ಹಾಗೂ ಪಾದದ ಮೇಲಿರುವ ರೇಖೆಗೂ ಸಂಬಂಧವಿದೆ. ಅಂಗೈ ಅಥವಾ ಅಂಗಾಲಿನ ರೇಖೆಯಲ್ಲಿ ತ್ರಿಶೂಲದ ಚಿಹ್ನೆಯಿದ್ದರೆ ಅಂತ ವ್ಯಕ್ತಿಯ ಮೇಲೆ ಶಿವನ ವಿಶೇಷ ಕೃಪೆಯಿರುತ್ತದೆ. ಈ ಬಗ್ಗೆ ಸಮುದ್ರಶಾಸ್ತ್ರದಲ್ಲಿ ವಿಸ್ತಾರವಾದ ಉಲ್ಲೇಖವಿದೆ.
ಹಸ್ತದ ರೇಖೆ ನಡುವೆ ತ್ರಿಶೂಲದ ಭಾಗ್ಯರೇಖೆಯಿದ್ದಲ್ಲಿ ಆ ವ್ಯಕ್ತಿ ಭಾಗ್ಯಶಾಲಿಯಾಗಿರುತ್ತಾನೆ.
ಹಸ್ತದ ಹೃದಯ ರೇಖೆಯ ಮೇಲೆ ಗುರು, ಪರ್ವತ ರೇಖೆಯ ಸಮೀಪ ತ್ರಿಶೂಲದ ರೇಖೆಯಿದ್ದಲ್ಲಿ ಅಂತ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.
ಸೂರ್ಯರೇಖೆಯ ಬಳಿ ತ್ರಿಶೂಲ ರೇಖೆಯಿದ್ದರೆ ಸರ್ಕಾರಿ ಕ್ಷೇತ್ರದಲ್ಲಿ ಲಾಭ ಮತ್ತು ಉನ್ನತ ಸ್ಥಾನ ಪ್ರಾಪ್ತಿಯಾಗುತ್ತದೆ.