ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಸಿಗುವ ಹಣ್ಣಾಗಿದೆ. ಇದನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಕಲ್ಲಂಗಡಿ ಹಣ್ಣುನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು. ಒಂದು ವೇಳೆ ರಾತ್ರಿಯ ವೇಳೆಯಲ್ಲಿ ಇದನ್ನು ಸೇವಿಸಿದರೆ ಕೆಲವು ಅನಾರೋಗ್ಯ ಸಮಸ್ಯೆ ಕಾಡಬಹುದು.
-ಕಲ್ಲಂಗಡಿ ಹಣ್ಣಿನಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾಗಿರುತ್ತದೆ. ಹಾಗಾಗಿ ಸಕ್ಕರೆ ಭರಿತ ಹಣ್ಣುಗಳನ್ನು ರಾತ್ರಿಯ ವೇಳೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಇದನ್ನು ರಾತ್ರಿಯ ಸಮಯದಲ್ಲಿ ಸೇವಿಸಬೇಡಿ.
-ಕಲ್ಲಂಗಡಿ ಹಣ್ಣನ್ನು ರಾತ್ರಿಯಲ್ಲಿ ಸೇವಿಸಿದಾಗ ಕರುಳಿನ ಸಮಸ್ಯೆ ಕಾಡುತ್ತದೆ. ಇದು ಮರುದಿನ ಹೊಟ್ಟೆಯ ಸಮಸ್ಯೆಯನ್ನುಂಟು ಮಾಡುತ್ತದೆ.
-ಕಲ್ಲಂಗಡಿ ಹಣ್ಣು ಬಹಳಷ್ಟು ನೀರಿನಾಂಶವನ್ನು ಹೊಂದಿರುವುದರಿಂದ ರಾತ್ರಿಯಲ್ಲಿ ಅವುಗಳನ್ನು ಸೇವಿಸುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಇದು ನಿದ್ರೆಯನ್ನು ಕೆಡಿಸುತ್ತದೆ. ಇದರಿಂದ ದೇಹಕ್ಕೆ ವಿಶ್ರಾಂತಿ ಸಿಗುವುದಿಲ್ಲ.