ಸರ್ವೆಯಲ್ಲಿ ದಪ್ಪಗಿರುವ ಮಹಿಳೆಯರು ಯಾವುದಕ್ಕೆ ಹೆಚ್ಚು ಹೆದರ್ತಾರೆ ಎಂಬುದು ಬಹಿರಂಗವಾಗಿದೆ. ಸರ್ವೆ ಪ್ರಕಾರ, ದಪ್ಪಗಿರುವ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲವಂತೆ. ತೂಕ ಹೆಚ್ಚಿರುವ ಕಾರಣ ಸಂಭೋಗ ನಡೆಸಲು ಅವ್ರು ಹೆದರುತ್ತಾರಂತೆ.
ಹೆಚ್ಚು ಕೊಬ್ಬಿರುವ ಮಹಿಳೆಯರಿಗೆ ಸೆಕ್ಸ್ ಒಂದು ಸಮಸ್ಯೆಯಾಗುತ್ತದೆ. ಅವ್ರ ದಡೂತಿ ಆಕೃತಿ ಸಂಭೋಗದ ವೇಳೆ ತೊಂದರೆ ಅನುಭವಿಸುವಂತೆ ಮಾಡುತ್ತದೆ. ಮಾಹಿತಿ ಪ್ರಕಾರ ಶೇಕಡಾ 50ರಷ್ಟು ಮಹಿಳೆಯರು ಇದನ್ನು ಒಪ್ಪಿಕೊಂಡಿದ್ದಾರೆ.
ತೂಕ ಹೆಚ್ಚಾದಂತೆ ದೇಹದ ಆಕೃತಿ ಬದಲಾಗುತ್ತದೆ. ಅಂತರಂಗದ ವೇಳೆ ಇದು ನಾಚಿಕೆಯನ್ನುಂಟು ಮಾಡುತ್ತದೆ. ತಮ್ಮ ದೇಹದ ಆಕೃತಿ ಸಂಗಾತಿ ಆಸಕ್ತಿಯನ್ನು ಕಡಿಮೆ ಮಾಡಿದ್ರೆ ಎಂಬ ಭಯ ಕಾಡಲು ಶುರುವಾಗುತ್ತದೆ. ಹಾಗಾಗಿ ಸಂಭೋಗದಿಂದ ದೂರವಿರಲು ಮಹಿಳೆಯರು ಬಯಸುತ್ತಾರೆ.
ಶೇಕಡಾ 29ರಷ್ಟು ಮಹಿಳೆಯರು ಸ್ಥೂಲಕಾಯದ ಕಾರಣ ಸಂಭೋಗ ನಡೆಸುವುದಿಲ್ಲ ಎಂದಿದ್ದಾರೆ. ಶೇಕಡಾ 23ರಷ್ಟು ಮಹಿಳೆಯರು ದೇಹದ ಆಕೃತಿ ಸರಿಯಿಲ್ಲದ ಕಾರಣ ಸೆಕ್ಸ್ ನಿಂದ ದೂರವಿರುವುದಾಗಿ ಹೇಳಿದ್ದಾರೆ. ಕೊಬ್ಬು, ಮಹಿಳೆಯರು ಆತ್ಮವಿಶ್ವಾಸ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.