ನಗುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಅನ್ನೋದನ್ನು ನೀವು ಕೇಳಿರಬೇಕು. ಕೆಲವರು ನಗುವನ್ನು ಪ್ರತಿನಿತ್ಯದ ವ್ಯಾಯಾಮದ ಭಾಗವಾಗಿಸಿಕೊಂಡಿದ್ದಾರೆ. ಅದೇ ರೀತಿ ಅಳುವುದರಿಂದಲೂ ಪ್ರಯೋಜನಗಳಿವೆ. ಅಳಬೇಕು ಎನಿಸಿದಾಗಲೆಲ್ಲ ಅದನ್ನು ತಡೆಯಬೇಡಿ. ಏಕೆಂದರೆ ಅಳು ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯಕರವಾಗಿಡುತ್ತದೆ. ಮಾನವರ ಕಣ್ಣೀರಿನಲ್ಲಿ 3 ವಿಧಗಳಿವೆ. ಇದು ವಿವಿಧ ಸಮಯಗಳಲ್ಲಿ ಹೊರಬರುತ್ತದೆ.
ಬೇಸಲ್ ಕಣ್ಣೀರು: ಕೆಲವು ಬಾರಿ ನೀವು ನಿದ್ರಿಸಿರುತ್ತೀರಿ, ಕಣ್ಣು ಮಿಟುಕಿಸಿದಾಗ ಕಣ್ಣುಗಳಿಂದ ಕಣ್ಣೀರು ಬರುತ್ತದೆ. ಇದನ್ನು ಬೇಸಲ್ ಟಿಯರ್ಸ್ ಎಂದು ಕರೆಯಲಾಗುತ್ತದೆ.
ರಿಫ್ಲೆಕ್ಸ್ ಟಿಯರ್ಸ್: ಕೆಲವೊಮ್ಮೆ ರಸ್ತೆಗಳಲ್ಲಿ ಹೋಗುವಾಗ, ಧೂಳು ಮತ್ತು ಹೊಗೆಯಿಂದಾಗಿ ಕಣ್ಣಲ್ಲಿ ನೀರು ಬರುತ್ತದೆ. ಈ ರೀತಿಯ ಕಣ್ಣೀರು ನಮ್ಮ ಕಣ್ಣುಗಳನ್ನು ಸ್ವಚ್ಛಗೊಳಿತ್ತದೆ. ಇದನ್ನು ರಿಫ್ಲೆಕ್ಸ್ ಟಿಯರ್ಸ್ ಎಂದು ಕರೆಯಲಾಗುತ್ತದೆ.
ಭಾವನಾತ್ಮಕ ಕಣ್ಣೀರು: ಕೆಲವೊಮ್ಮೆ ನಾವು ಭಾವುಕರಾದಾಗ ಕಣ್ಣೀರು ತಂತಾನೇ ಬರುತ್ತದೆ. ಯಾವುದೇ ಸಂಗತಿ ಅಥವಾ ಘಟನೆ ಕಣ್ಣೀರು ಹೊರಬರುವಷ್ಟು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಈ ರೀತಿಯ ಕಣ್ಣೀರನ್ನು ಭಾವನಾತ್ಮಕ ಕಣ್ಣೀರು ಎಂದು ಕರೆಯಲಾಗುತ್ತದೆ, ಇದು ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.
ಅಳುವುದರಿಂದ ಏನು ಪ್ರಯೋಜನ?
ಅತ್ತಾಗ ನಮ್ಮ ಭಾವನೆಗಳು ನಿಯಂತ್ರಣದಲ್ಲಿರುತ್ತವೆ. ಇದರಿಂದಾಗಿ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. ನಾವು ಅತ್ತಾಗ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಈ ಕಾರಣದಿಂದಾಗಿ ದೈಹಿಕ ಮತ್ತು ಭಾವನಾತ್ಮಕ ನೋವು ಕಡಿಮೆಯಾಗುತ್ತದೆ. ಐಸೋಜೈಮ್ ಎಂಬ ದ್ರವವು ಕಣ್ಣೀರಿನಲ್ಲಿ ಕಂಡುಬರುತ್ತದೆ, ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ಕಣ್ಣುಗಳನ್ನು ಸ್ವಚ್ಛಗೊಳಿಸುತ್ತದೆ.
ಕಣ್ಣೀರಿನಿಂದಾಗಿ ಕಣ್ಣುಗಳ ಲೋಳೆಯು ಒಣಗುವುದಿಲ್ಲ ಮತ್ತು ಕಣ್ಣುಗಳು ದೀರ್ಘಕಾಲದವರೆಗೆ ಆರೋಗ್ಯಕರವಾಗಿರುತ್ತವೆ. ಅಳುವುದರಿಂದ ಇತರ ಭಾವನೆಗಳಿಗೆ ಬೆಂಬಲ ಸಿಗುತ್ತದೆ. ಹಾಗಾಗಿ ಅಳಬೇಕು ಎನಿಸಿದಾಗ ಅದನ್ನು ತಡೆಯಬೇಡಿ, ಮನಸ್ಪೂರ್ತಿಯಾಗಿ ಅತ್ತುಬಿಡಿ. ಏಕೆಂದರೆ ಏಕೆಂದರೆ ಅಳುವುದು ಕೂಡ ಒಳ್ಳೆಯದು.