ಪ್ಯಾರಿಸ್: ನೀವು ಕಾಲೇಜು ಹೋಗುತ್ತಿರುವುವರಾಗಿದ್ದರೆ ಅಥವಾ ಹೋಗಿದ್ದವರಾಗಿದ್ದರೆ ಖಂಡಿತಾ ನಿಮ್ಮಲ್ಲಿ ಬಹುತೇಕ ಮಂದಿ ಕ್ಲಾಸ್ ಬಂಕ್ ಮಾಡಿರುತ್ತೀರಾ ಅಲ್ವಾ..?
ಆದರೆ, ಇದೀಗ ಫ್ರಾನ್ಸ್ ನಲ್ಲಿ ಶುರುವಾಗಿರುವ ಹೊಸ ಕೋರ್ಸ್ ಗೆ ಸೇರ್ಪಡೆಯಾದ್ರೆ ಖಂಡಿತಾ ನೀವು ಒಂದು ದಿನವೂ ಕ್ಲಾಸ್ ಅನ್ನು ಮಿಸ್ ಮಾಡೋದೇ ಇಲ್ಲ…. ಅದು ಯಾಕೆ ಅಂತೀರಾ..? ಈ ಸ್ಟೋರಿ ಓದಿ.
ಹೌದು, ಫ್ರಾನ್ಸ್‌ನಲ್ಲಿ ಹೊಚ್ಚ ಹೊಸ ಸ್ನಾತಕೋತ್ತರ ಪದವಿ ಕೋರ್ಸ್ ಪ್ರಾರಂಭವಾಗಿದೆ. ಅಷ್ಟಕ್ಕೂ ಅದು ಏನು ಗೊತ್ತಾ..? ಕುಡಿಯುವುದು, ತಿನ್ನುವುದು ಮತ್ತು ಇಂದಿನ ಜೀವನಶೈಲಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಯಲು ಬಯಸುವವರಿಗೆ ಫ್ರಾನ್ಸ್‌ನ ಉನ್ನತ ವಿಶ್ವವಿದ್ಯಾಲಯವು ಈಗ ಸ್ನಾತಕೋತ್ತರ ಪದವಿ ಕೋರ್ಸ್ ಅನ್ನು ನೀಡುತ್ತಿದೆ.
ನಿಜವಾಗಲೂ ಇದು ತಮಾಷೆಯಲ್ಲ. ಕುಡಿಯುವುದು, ತಿನ್ನುವುದು ಮತ್ತು ಬದುಕುವುದನ್ನು ಆನಂದಿಸುವವರು ಈಗ ಫ್ರಾನ್ಸ್‌ನ ಅತ್ಯಂತ ಪ್ರತಿಷ್ಠಿತ ರಾಜಕೀಯ ವಿಜ್ಞಾನ ಶಾಲೆಗಳಲ್ಲಿ ಒಂದಾದ ಸೈನ್ಸ್ ಪೊ ಲಿಲ್ಲೆಯಿಂದ ಈ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು.
ಬಿಎಂವಿ ಎಂಬ ಕೋರ್ಸ್ ಇದಾಗಿದೆ. ಪಠ್ಯಕ್ರಮವು ಗ್ಯಾಸ್ಟ್ರೋ-ಡಿಪ್ಲೊಮಸಿ, ಆಹಾರ ತಂತ್ರಜ್ಞಾನ ಮುಂತಾದವುಗಳನ್ನು ಒಳಗೊಂಡಿದೆ. ಈ ಹೊಸ ವಿಷಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದಾಗ, ಅವರಲ್ಲಿ ಅನೇಕರು ನಕ್ಕಿದ್ದಾರೆ. ಈಗಾಗಲೇ 15 ಮಂದಿ ವಿದ್ಯಾರ್ಥಿಗಳು ಈ ಕೋರ್ಸ್ ಗೆ ಸೇರ್ಪಡೆಯಾಗಿದ್ದಾರಂತೆ.