ನೀವು ಸಸ್ಯಾಹಾರಿಗಳೇ. ದೇಹ ತೂಕ ಇಳಿಸುವ ಯಾವ ವಿಧಾನ ಅನುಸರಿಸುವುದು ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯೇ. ಆರೋಗ್ಯಕರ ಜೀವನಶೈಲಿಯೊಂದಿಗೆ ತೂಕ ಇಳಿಸುವ ಎರಡು ಸರಳ ವಿಧಾನಗಳ ಬಗ್ಗೆ ನಾವಿಲ್ಲಿ ತಿಳಿಯೋಣ.
ತೂಕ ಇಳಿಸುವುದು ಅಸಾಧ್ಯವಾದ ಕೆಲಸ ಎಂದು ಕೈಚೆಲ್ಲಿ ಕುಳಿತಿದ್ದೀರಾ. ತರಕಾರಿ, ಹಣ್ಣು ಮತ್ತು ಧಾನ್ಯಗಳ ಸೇವನೆಯಿಂದಲೂ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಲವು ದಿನಗಳ ಮಟ್ಟಿಗೆ ಮಾಂಸಾಹಾರವನ್ನು ದೂರವಿಟ್ಟು ಫೈಬರ್ ಅಂಶ ಹೇರಳವಾಗಿರುವ ಹಣ್ಣು – ಧಾನ್ಯಗಳನ್ನು ಸೇವಿಸಿ.
ಕಡಿಮೆ ಪ್ರಮಾಣದ ಕೊಬ್ಬು ಹೊಂದಿರುವ ಎಲ್ಲಾ ವಸ್ತುಗಳು ದೇಹ ತೂಕ ಇಳಿಸಲು ನೆರವಾಗುತ್ತವೆ. ಸಸ್ಯಹಾರಿ ಆಹಾರದಲ್ಲಿ ಫೈಬರ್, ಪೊಟ್ಯಾಸಿಯಂ, ಮತ್ತು ವಿಟಮಿನ್ ಗಳಿವೆ. ಇವು ಕ್ಯಾಲೊರಿಯನ್ನು ಕಡಿಮೆ ಮಾಡುವ ನೈಸರ್ಗಿಕ ಲಕ್ಷಣಗಳನ್ನು ಹೊಂದಿವೆ.
ಚಿಯಾ ಬೀಜಗಳಲ್ಲಿ ಫೈಬರ್, ಒಮೆಗಾ 3 ಅಧಿಕವಾಗಿವೆ. ಮೊಟ್ಟೆ ಅಥವಾ ಮಾಂಸಾಹಾರ ಬಿಟ್ಟು ಹೊರಬರುವವರಿಗೆ ಇದು ಅತ್ಯುತ್ತಮ ಅಹಾರವಾಗಿದೆ. ಬ್ರೊಕೋಲಿಯಲ್ಲಿ ವಿಟಮಿನ್ ಕೆ, ಸಿ, ಪ್ರೊಟೀನ್ ಕಬ್ಬಿಣದಂತ ಹಲವು ಸೂಕ್ಷ್ಮ ಪೋಷಕಾಂಶಗಳಿವೆ. ನೀರಿನ ಅಂಶವೂ ಇದರಲ್ಲಿ ಸಾಕಷ್ಟಿದೆ.
ಮೊಟ್ಟೆ ಬದಲಿಗೆ ಹೂಕೋಸು ಬಳಸಿ ಅದೇ ಪ್ರಮಾಣದ ಪೋಷಕಾಂಶ ಪಡೆಯಬಹುದು. ಅಣಬೆಯೂ ಕ್ಯಾಲೊರಿ ಮುಕ್ತವಾಗಿದ್ದು, ಕೊಲೆಸ್ಟ್ರಾಲ್ ಕೂಡಾ ಕಡಿಮೆ ಪ್ರಮಾಣದಲ್ಲಿದೆ.