ಪ್ರವಾಸ ಹೋಗೋದು ಬಹಳ ಇಷ್ಟವಾದ ಕೆಲಸ, ಆದ್ರೆ ಇದಕ್ಕೆ ಬಜೆಟ್ ಹೊಂದಿಸೋದು ಎಲ್ಲರಿಗೂ ಸುಲಭದ ಮಾತಲ್ಲ. ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಪ್ರವಾಸ ಕೈಗೊಳ್ಳಲು ಎಲ್ಲರೂ ಬಯಸ್ತಾರೆ. ಪ್ರವಾಸದ ಸಮಯದಲ್ಲಿ ಅತಿ ಹೆಚ್ಚು ವೆಚ್ಚವಾಗುವುದು ಸಾರಿಗೆಗೆ. ಇದರಲ್ಲಿ ಉಳಿತಾಯ ಮಾಡಿದ್ರೆ ಕಡಿಮೆ ಬಜೆಟ್ನಲ್ಲಿ ಒಳ್ಳೆಯ ಟ್ರಿಪ್ ಮಾಡಬಹುದು. ಸಾರಿಗೆ ಸೇವೆಯು ಉಚಿತವಾಗಿರುವ ಕೆಲವು ದೇಶಗಳ ಬಗ್ಗೆ ತಿಳಿಯೋಣ.
ಕೆನಡಾ: 2012 ರಿಂದಲೂ ಚಾಂಬ್ಲಿ ಮತ್ತು ಕೆನಡಾದ ಹತ್ತಿರದ ಪಟ್ಟಣಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಇದೆ.
ಲಕ್ಸೆಂಬರ್ಗ್: 2020 ರಿಂದೀಚೆಗೆ ಲಕ್ಸೆಂಬರ್ಗ್ ತನ್ನ ನಿವಾಸಿಗಳಿಗೆ ಉಚಿತ ಸಾರಿಗೆ ಸೌಲಭ್ಯವನ್ನು ಪ್ರಾರಂಭಿಸಿದೆ. ಪರಿಸರ ಕಾಳಜಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪರ್ತ್, ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಪರ್ತ್ನಲ್ಲಿ ಉಚಿತ ಸಾರಿಗೆ ಸೌಲಭ್ಯವಿದೆ. ಆದರೆ ಬೇರೆ ನಗರದ ನಿವಾಸಿಗಳು, ಇತರೆಡೆಗಳಿಂದ ಬಂದವರು ಹಣ ಪಾವತಿಸಬೇಕಾಗುತ್ತದೆ.
ಮೇರಿಹೇಮನ್, ಫಿನ್ಲ್ಯಾಂಡ್: ಇದು ಫಿನ್ಲ್ಯಾಂಡ್ನ ರಾಜಧಾನಿ. ಸ್ವಾಯತ್ತ ದ್ವೀಪವಾಗಿದ್ದು, ಫಿನ್ಲ್ಯಾಂಡ್ ಗಣರಾಜ್ಯಕ್ಕೆ ಸೇರಿದೆ. ಇಲ್ಲಿಗೆ ಭೇಟಿ ನೀಡುವವರು ಮತ್ತು ನಿವಾಸಿಗಳಿಗೆ ಉಚಿತ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಅವೆಸ್ಟಾ, ಸ್ವೀಡನ್: ಸ್ವೀಡನ್ನ ಅವೆಸ್ಟಾ ನಗರದಲ್ಲಿ ಜನರು ಉಚಿತ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಪಡೆಯುತ್ತಾರೆ. ಹಲವು ವರ್ಷಗಳಿಂದ ಇಲ್ಲಿ ಈ ಸೌಲಭ್ಯ ನೀಡಲಾಗುತ್ತಿದೆ.ಟ್ಯಾಲಿನ್, ಎಸ್ಟೋನಿಯಾ, ಡ್ಯೂಸ್ಬರಿ, ಯುಕೆ, ಕ್ಲೆಮ್ಸನ್, ಕ್ಲೆಮ್ಸನ್ ವಿಶ್ವವಿದ್ಯಾಲಯ, ಪೆಂಡಲ್ಟನ್, ಸೆಂಟ್ರಲ್ ಮತ್ತು ಯುಎಸ್ಎಯ ದಕ್ಷಿಣ ಕೆರೊಲಿನಾದ ಸೆನೆಕಾದಲ್ಲಿ ಉಚಿತ ಸಾರ್ವಜನಿಕ ಸಾರಿಗೆಯನ್ನು ಒದಗಿಸಲಾಗಿದೆ.