ವ್ಯಕ್ತಿಯೊಬ್ಬನಿಗೆ ತನ್ನ ಸ್ವಂತ ವಾಹನದ ಮೇಲೆ ಇರುವ ಪ್ರೀತಿ ಕೆಲವೊಮ್ಮೆ ಎಲ್ಲವನ್ನೂ ಮೀರಿಸುತ್ತದೆ. ನಾಗ್ಪುರದಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿದೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಅನ್ನು ಕ್ರೇನ್ ನಿಂದ ಎತ್ತಿಕೊಂಡು ಹೋಗುತ್ತಿದ್ದರೆ, ಅದರಿಂದ ಇಳಿಯದ ಆತ ಸ್ಕೂಟರ್ ಸಹಿತ ಮೇಲಕ್ಕೆತ್ತಿರುವ ವಿಡಿಯೋ ವೈರಲ್ ಆಗಿದೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಮ್ ನಾಗ್‌ಪುರ್ಕರ್ ಎಂಬ ಪುಟ ಹಂಚಿಕೊಂಡಿದೆ. ಮಹಾರಾಷ್ಟ್ರದ ನಾಗ್ಪುರದ ಸದರ್ ಬಜಾರ್‌ನಲ್ಲಿರುವ ನೋ ಪಾರ್ಕಿಂಗ್ ಸ್ಥಳದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ.
ವಾಹನ ಎಳೆದೊಯ್ಯುವ ಪೊಲೀಸ್ ಟ್ರಕ್ ನಲ್ಲಿ ಸ್ಕೂಟರ್ ಸಹಿತ ಅದರ ಮಾಲೀಕ ಕುಳಿತಿರುವ ದೃಶ್ಯವನ್ನು ಗಮನಿಸಬಹುದು. ಯಾವುದೇ ರೀತಿಯ ಗಾಬರಿಯಾಗದ ವ್ಯಕ್ತಿ ಚಿಲ್ ಮಾಡಿದ್ದಾನೆ. ಈ ವಿಡಿಯೋ ಕ್ರೇಜಿ ವೈರಲ್ ಆಗಿದ್ದು, 2 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.