
ಉತ್ತಮ ಆರೋಗ್ಯ ಮತ್ತು ಸದೃಢ ದೇಹವನ್ನು ಹೊಂದಲು ವಿಟಮಿನ್ ಎ, ಬಿ, ಸಿ ಮತ್ತು ಡಿ ಎಷ್ಟು ಅಗತ್ಯವೋ ಅದೇ ರೀತಿ ವಿಟಮಿನ್ ಬಿ 12 ಕೂಡ ಬೇಕಾಗುತ್ತದೆ. ಇದು ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದರೆ ರೋಗಗಳು ನಮ್ಮನ್ನು ಸುಲಭವಾಗಿ ಬಾಧಿಸುವುದಿಲ್ಲ. ವಿಟಮಿನ್ ಬಿ 12 ಅತ್ಯಗತ್ಯ ಪೋಷಕಾಂಶವಾಗಿದೆ.
ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಏಕೆ ಸಂಭವಿಸುತ್ತದೆ?
ವಿಟಮಿನ್ ಬಿ12 ಇರುವ ಆಹಾರವನ್ನು ಸೇವಿಸದೇ ಇರುವುದು ಕೂಡ ಕೊರತೆಗೆ ಕಾರಣವಾಗಬಹುದು. ಎಚ್‌ಐವಿಯಂತಹ ಅಪಾಯಕಾರಿ ಕಾಯಿಲೆಗಳಿಂದಾಗಿ ವಿಟಮಿನ್ ಬಿ12 ದೇಹದಲ್ಲಿ ಹೀರಲ್ಪಡುವುದಿಲ್ಲ. ಕೆಲವು ಕೆಟ್ಟ ಬ್ಯಾಕ್ಟೀರಿಯಾಗಳು, ಪ್ರತಿಜೀವಕಗಳು, ಶಸ್ತ್ರಚಿಕಿತ್ಸೆ ಮತ್ತು ಟೇಪ್ ವರ್ಮ್ಗಳು ಸಹ ಈ ವಿಟಮಿನ್ ಕೊರತೆಗೆ ಕಾರಣವಾಗಬಹುದು.
ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು
– ತಲೆತಿರುಗುವಿಕೆ
– ಹಸಿವಾಗದೇ ಇರುವುದು
– ಚರ್ಮವು ಹಳದಿ ಅಥವಾ ಮಂದವಾಗುತ್ತದೆ
– ಆಗಾಗ್ಗೆ ಮನಸ್ಥಿತಿ ಬದಲಾವಣೆ
– ಒತ್ತಡ
-ತುಂಬಾ ದಣಿವು
– ತೂಕ ಇಳಿಕೆ
– ಕೈ ಕಾಲುಗಳಲ್ಲಿ ಜುಮ್ಮೆನ್ನುವುದು
– ತ್ವರಿತ ಹೃದಯ ಬಡಿತ
– ಸ್ನಾಯು ದೌರ್ಬಲ್ಯ
ವಿಟಮಿನ್ ಬಿ-12 ಕೊರತೆಯಿಂದ ಉಂಟಾಗುವ ರೋಗಗಳು…
– ಮರೆವು ಮತ್ತು ಗೊಂದಲದ ಸಮಸ್ಯೆಯ ಅಪಾಯ ಹೆಚ್ಚಾಗುತ್ತದೆ.
– ಮೂಳೆಗಳಲ್ಲಿ ನೋವು ಪ್ರಾರಂಭವಾಗುತ್ತದೆ.
– ಇಡೀ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
-ದೇಹದ ಪ್ರತಿಯೊಂದು ಭಾಗಕ್ಕೂ ರಕ್ತ ತಲುಪಿಸಲು ತೊಂದರೆಯಾಗುತ್ತದೆ.
ವಿಟಮಿನ್ ಬಿ-12 ಆರೋಗ್ಯಕ್ಕೆ ಏಕೆ ಮುಖ್ಯ?
ವಿಟಮಿನ್ ಬಿ-12 ಕೊರತೆ ಮೆದುಳು ಮತ್ತು ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಸಾಕಷ್ಟು ವಿಟಮಿನ್ ಬಿ-12 ಬೇಕು. ವಿಟಮಿನ್ ಬಿ 12 ಕೊರತೆ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು. ಈ ಅಗತ್ಯ ವಿಟಮಿನ್ ಕೊರತೆಯು ಮೂಳೆಗಳು ಮತ್ತು ಕೀಲುಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಇದು ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತದೆ. ವಿಟಮಿನ್ ಬಿ12 ದೇಹದಲ್ಲಿ ಶಕ್ತಿ ಉತ್ಪಾದನೆಗೂ ಅಗತ್ಯ.
ವಿಟಮಿನ್ ಬಿ 12 ಇರುವ ಪದಾರ್ಥಗಳು…
ದೇಹದಲ್ಲಿ ಈ ವಿಟಮಿನ್ ಕೊರತೆಯನ್ನು ಅನುಭವಿಸುತ್ತಿದ್ದರೆ ಗಿಣ್ಣು, ಓಟ್ಸ್, ಹಾಲು, ಬ್ರೊಕೊಲಿ, ಅಣಬೆ, ಮೀನು, ಮೊಟ್ಟೆ, ಸೋಯಾಬೀನ್
ಮತ್ತು ಮೊಸರು ಸೇವಿಸಬೇಕು.