ಸುಖ-ಶಾಂತಿಗಾಗಿ ವಾಸ್ತು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮುಖ್ಯ ಬಾಗಿಲು ಮನೆಗೆ ಸಂತೋಷವನ್ನು ಸ್ವಾಗತಿಸುವ ಜಾಗ. ಮನೆಯಲ್ಲಿ ಅಶಾಂತಿ, ದುಃಖವಿದ್ದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿದೆ ಎಂದೇ ಅರ್ಥ. ಮನೆಯ ಮುಖ್ಯ ದ್ವಾರದ ಬಳಿ ಕೆಲವೊಂದು ವಸ್ತುಗಳನ್ನು ಎಂದೂ ಇಡಬಾರದು.
ಅಂತರ್ಜಲವಿರುವ ಪ್ರದೇಶದಲ್ಲಿ ಮುಖ್ಯ ದ್ವಾರವಿದ್ದರೆ ಮನೆಯಲ್ಲಿ ಆತ್ಮಹತ್ಯೆ ಮೂಲಕ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಮುಖ್ಯದ್ವಾರ ತೆರೆಯಲು ಹಾಗೂ ಮುಚ್ಚುವ ವೇಳೆ ಯಾವುದೇ ತಡೆ ಇರದಂತೆ ನೋಡಿಕೊಳ್ಳಬೇಕು.
ಮನೆಯ ಒಳಗೆ ಅಥವಾ ದ್ವಾರದ ಬಳಿ ಮುಳ್ಳಿನ ಗಿಡವನ್ನು ಇಡಬೇಡಿ. ಇದ್ರಿಂದ ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ.
ಪಶ್ಚಿಮದಲ್ಲಿ ಮುಖ್ಯ ದ್ವಾರವಿದ್ದರೆ ಮನೆಯ ಪುರುಷರು ಜೈಲಿಗೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಪಘಾತ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
ಮುಖ್ಯದ್ವಾರದ ಬಳಿ ಕಸದ ಬುಟ್ಟಿಯನ್ನು ಇಡಬೇಡಿ. ಇದ್ರಿಂದ ಲಕ್ಷ್ಮಿ ಮುನಿಸಿಕೊಳ್ತಾಳೆ.
ಮನೆಯ ಪೂರ್ವ ಮತ್ತು ಆಗ್ನೇಯ ಭಾಗದಲ್ಲಿ ಮುಖ್ಯದ್ವಾರವಿದ್ದರೆ ಮನೆಯಲ್ಲಿ ಗಲಾಟೆ ಹಾಗೂ ಕಳ್ಳತನ ನಡೆಯುತ್ತದೆ.